ಕಾವ್ಯ ಸಂಗಾತಿ
ನಿಶ್ಚಿತ.ಎಸ್.
ನನ್ನವ್ವ
ಬಸಿರಲ್ಲಿ ನನ್ನನಿಟ್ಟು…. ಉಸಿರು ಕೊಟ್ಟವಳು ನನ್ನವ್ವ….
ಈ ಉಸಿರೊಳಗೆ ಅವಳ ಉಸಿರು ಇರುವುದು ….
ಸದಾ ನನ್ನ ಕನಸಿಗಾಗಿ ತನ್ನ ಕನಸನ್ನು ಮುಡುಪಾಗಿಟ್ಟಿರುವವಳು ನನ್ನವ್ವ …..
ನಾಒಳಿತೆ ಮಾಡಲಿ…
ಕೆಡುಕೆ ಮಾಡಲಿ…
ಅದ ತಿದ್ದಿ ಬುದ್ದಿ ಹೇಳಿ…
ನನ್ನ ಸುಖಬಯಸುವವಳು ನನ್ನವ್ವ…
ನೋವು. ನಲಿವುಗಳಲ್ಲಿ ಜೊತೆಯಾಗಿ…
ಪ್ರೀತಿಗೆ ಕೊರತೆ ಬಾರದಂತೆ …
ಸದಾ ನನ್ನ ಪ್ರೀತಿಸುವವಳು ನನ್ನವ್ವ….
ನಾ ಅವಳ ತುಸು ನೋಯಿಸಿದರು….
ಒಂದಿಷ್ಟು ನನ್ನ ನೋಯಿಸದೆ…
ಸಾಕು ಸಲುಹಿತಿರುವಳು ಅವಳು ನನ್ನವ್ವ ….
ಪ್ರೀತಿಗೆ ಸಾಕ್ಷಾತ್ಕಾರ ….
ಮಮತೆಯಲ್ಲಿ ಸದಾ ಅವಳ ಜೇಂಕಾರ …
ತುಸುಕೋಪದಲ್ಲೂ ಜೋಪಾನ ಮಾಡುವಳು ನನ್ನವ್ವ….
ನಾಬರಿ ಕನಸೇ ಕಂಡರು…
ಅದನ್ನು ನನಸಾಗಿಸುವವಳು …
ತನ್ನ ಕನಸನ್ನು ಹೊತ್ತೆಯಿಟ್ಟು ನನ್ನವ್ವ ….
ನಿನ್ನ ಪಡೆಯಲು ನಾ ಮಾಡಿರುವೆ ಪುಣ್ಯವ ….
ನಾ ತೀರಿಸಲಾರೆ ನಿನ್ನ ಋಣವ….
ಆದಮೇಲೆ ನನ್ನ ಮರಣ…
ನೀನೇ ನನ್ನ ದೈವ ನನ್ನವ್ವ …
ಅವಳೇ ನನ್ನ ಸುಧಾವ್ವ
ನಿಶ್ಚಿತ.ಎಸ್
ನಿಮ್ಮ ಬರವಣಿಗೆ ಹಾಗೂ ಕವಿತೆ ತುಂಬಾ ಚೆನ್ನಾಗಿ ಇದೆ
ನಿಮ್ಮ ಕವಿತಾಪ್ರೌಢಿಮೆ ಮುಗಿಲೆತ್ತರಕ್ಕೆ ಏರಲಿ.. ……
ಅವ್ವನೊಲವ,
ಪ್ರೀತಿ ಗುಣವ,
ಬರೆದೆ ನೀ ಪದಗಳಲಿ,
ಓದಿದೆ ನಾ ಪುಟಗಳಲಿ,
ನಿನ್ನ ವರ್ಣನೆಗೆ ನನ್ನದೊಂದು ನಮನ