ಕಾವ್ಯ ಸಂಗಾತಿ
ಜಿ. ಹರೀಶ್ ಬೇದ್ರೆ
ನಮ್ಮ ನೀ ಮನ್ನಿಸು ಭೂದೇವಿ
ಮುಂಜಾನೆ ಎದ್ದಾಗಿನಿಂದ ರಾತ್ರಿ
ಮಲಗುವವರೆಗೂ ನಿನ್ನ ತುಳಿದೇ
ಓಡಾಡುವ ನಮ್ಮನ್ನು ಮನ್ನಿಸು
ಬದುಕುವುದು ನಾಲ್ಕು ದಿನ ಎಂದು
ಅರಿತ್ತಿದ್ದರೂ ಗಿಡಮರಗಳ ಕಡಿದು
ಬಂಗಲೆ ಕಟ್ಟುವ ನಮ್ಮನ್ನು ಕ್ಷಮಿಸು
ನಡೆದಾಡುವುದು ನಮಗೇ ಒಳಿತೆಂದು
ತಿಳಿದಿದ್ದರೂ ವಾಹನಗಳ ಬಳಸಿ
ಮಾಲಿನ್ಯ ಸೃಷ್ಟಿಸುವ ನಮ್ಮನ್ನು ಕ್ಷಮಿಸು
ಉಸಿರೇ ನಮಗೆ ಆಸರೆ ಎಂಬ
ಅರಿವಿದ್ದರೂ ಕೂಡ ಬಿಡದೆ
ಮಲಿನಗೊಳಿಸುವ ನಮ್ಮನ್ನು ಕ್ಷಮಿಸು
ಜನರ ಜೀವನಾಡಿ ನೀರೆಂದು
ತಿಳಿದೂ ತಿಳಿದು ಹೊಲಸು
ಮಾಡುತ್ತಿರುವ ನಮ್ಮನ್ನು ಕ್ಷಮಿಸು
ಶತಶತಮಾನಗಳಿಂದ ನಮ್ಮನ್ನು
ಇರಲು ಬಿಟ್ಟ ನಿನ್ನ ಇರದಂತೆ ಮಾಡಲು
ಹೊರಟ ನಮ್ಮನ್ನು ಕ್ಷಮಿಸು
ಜಿ. ಹರೀಶ್ ಬೇದ್ರೆ
ಸರಳ ಸುಂದರ ವಾಸ್ತವಿಕ ಕವಿತೆ. ಪರಿಸರ ಉಳಿಸಿ ಬೆಳೆಸಲು ಮಾರ್ಮಿಕ ಸಂದೇಶ.
ಧನ್ಯವಾದಗಳು ಸರ್
ತುಂಬಾ ಅರ್ಥಪೂರ್ಣವಾಗಿ ಭೂದೇವಿಯ ಬಗ್ಗೆ ವರ್ಣಿಸಿದ್ದೀರಿ.