ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ನಾನು ನಕ್ಕೆ
ಸಣ್ಣ ಖುಶಿಗಳಿಗೆ ನಕ್ಕೆ
ಒತ್ತಡದೊಳಗೂ ನಕ್ಕೆ
ಗಳಿಸಿದಾಗ ನಕ್ಕೆ
ಕಳಕೊಂಡಾಗಲೂ ನಕ್ಕೆ
ಗೆಳೆಯರು ಜೊತೆಯಾದಾಗ ನಕ್ಕೆ
ದೂರಾದಾಗಲೂ ನಕ್ಕೆ
ಸಂಬಂಧಗಳು ಬೆಸೆದಾಗ ನಕ್ಕೆ
ಒಡೆದು ಹೋದಾಗಲೂ ನಕ್ಕೆ
ಸಂಪಾದನೆಯ ಹಣ ಕಂಡು ನಕ್ಕೆ
ಕೈ ಬರಿದಾದಾಗ ನಕ್ಕೆ
ಚಿನ್ನ ಖರೀದಿಸಿ ನಕ್ಕೆ
ಬಂಗಾರ ಕಳಕೊಂಡರೂ ನಕ್ಕೆ
ಪ್ರೀತಿಯಲ್ಲಿ ನಕ್ಕೆ
ವಿಶ್ವಾಸ ಘಾತ ಸಹಿಸಿ ನಕ್ಕೆ
ಜಯದಲ್ಲೂ ನಕ್ಕೆ
ಅಪಜಯ ದ ಕಲಿಕೆಯಲ್ಲೂ ನಕ್ಕೆ
ನಮ್ಮದಾಗಬೇಕಿರೋದು ನಮ್ಮದಾಗುತ್ತದೆ ನಮ್ಮದಲ್ಲದಿದ್ದದಕೆ ಯಾಕೆ ಅಳಬೇಕು
ನನ್ನ ನಗುವ ಕಸಿಯಲು
ನನ್ನ ಬಿಟ್ಟು ಬೇರೆ ಯಾರಿಂದಲೂ ಸಾಧ್ಯವೆ?
ಸೃಷ್ಟಿಯ ಬದಲಾವಣೆಗಳ ಹಿಂದೆ
ಜಗ ನಿಯಾಮಕನ ಸೂತ್ರ ವಿರಲು
ಒಳಿತನ್ನೆ ಮಾಡುವ ಅವನಲಿ ವಿಶ್ವಾಸವಿರಲು
ಅನವಶ್ಯಕ ಚಿಂತೆ ಯಾಕೆ?
ಇದನರಿತು ನಿರಾಳವಾಗಿ ನಕ್ಕೆ!!
—————————————
ಶಾಲಿನಿ ಕೆಮ್ಮಣ್ಣು