ಡಾ ಅನ್ನಪೂರ್ಣ ಹಿರೇಮಠ-ಇಂದೇ ಬನ್ನಿ ಶಾಲೆಗೆ

ಮಕ್ಕಳ ವಿಭಾಗ

ಇಂದೇ ಬನ್ನಿ ಶಾಲೆಗೆ

ಡಾ ಅನ್ನಪೂರ್ಣ ಹಿರೇಮಠ

ಬನ್ನಿ ಬನ್ನಿ ಶಾಲೆಗೆ ಬನ್ನಿ
ನಿಮ್ಮೆಲ್ಲರ ನಲಿವಿನ ಹಂದರಕ
ಅಕ್ಷರಗಳು ಅರಳುವ ತೋಟಕ
ವಿದ್ಯಾ ನೀಡುವ ಸರಸ್ವತಿ ದೇಗುಲಕ//

ಗೆಳೆಯರೊಂದಿಗೆ ಪ್ರೀತಿಯಲಿ
ಶಿಕ್ಷಕರೊಂದಿಗೆ ಗೌರವದಲಿ
ಪುಸ್ತಕದೊಂದಿಗೆ ಸ್ನೇಹದಲಿ
ನಲಿಯಲು ಬುದ್ಧಿಯ ವಿದ್ಯಾ ಮಂದಿರದಲಿ
ಬನ್ನಿ ಬನ್ನಿ ಮಕ್ಕಳೇ ಶಾಲೆಗೆ ಇಂದೆ ಬನ್ನಿ//

ನಾನು ನೀನು ಅವನು ಇವನು
ಅವಳು ಇವಳು ಅವರು ಇವರು
ಎಲ್ಲರೂ ನಲಿಯುವ ನಂದನದಲಿ
ಶಾಲೆಯ ಸುಂದರ ತೋಟದಲಿ
ಭೇದಭಾವ ಮರೆತು ಒಂದಾಗಿ ಪರಿಮಳಿಸಲು ಬನ್ನಿ//

ತಪ್ಪು ತಡೆಗಳ ತಿದ್ದಿಕೊಳ್ಳುತ
ಒಪ್ಪು ಓರಣ ಕಲಿಯುತ
ವಿದ್ಯೆಯ ಮಹತಿ ತಿಳಿಯುತ
ಮನದಿ ಅಡಗಿದ ಕತ್ತಲೆ ಕಳೆಯುಲು
ಬನ್ನಿ ಬನ್ನಿ ನಲಿಯಲು ಮಕ್ಕಳೇ ಇಂದೇ ಶಾಲೆಗೆ ಬನ್ನಿ//

ಒಂದೊಂದು ಮೆಟ್ಟಿಲು ಏರುತಲಿ
ಪ್ರಗತಿಯ ನೋಟ ನೋಡುತಲಿ
ಗುರಿಯತ್ತ ಚಿತ್ತ ಇರಿಸುತ
ಸಾಧನೆಯ ಛಲವ ಬಿಡದಲಿ
ಬನ್ನಿ ಸಾಧನೆಯ ಶಿಖರ ಏರುವ ನಂದನಕ//

ಬಾಳುವ ಕಲೆಯನು ಕಲಿಯುದಕ
ನೀತಿ ನಿಯಮ ತಿಳಿಯುದಕ
ಸಂಸ್ಕಾರದ ಕುಲುಮೆಯಲಿ ಮುಳುಗುದಕ
ದೇಶದ ಉತ್ತಮ ಪ್ರಜೆ ಆಗುವುದಕ
ಬನ್ನಿ ಬನ್ನಿ ಮಕ್ಕಳೇ ಇಂದೇ ಬನ್ನಿ ಅಕ್ಷರಗಳ
ತೋರಣ ಕಟ್ಟಿದ ಶಾಲಾ ಮಂದಿರಕ//


ಡಾ ಅನ್ನಪೂರ್ಣ ಹಿರೇಮಠ

One thought on “ಡಾ ಅನ್ನಪೂರ್ಣ ಹಿರೇಮಠ-ಇಂದೇ ಬನ್ನಿ ಶಾಲೆಗೆ

Leave a Reply

Back To Top