ಮಾನಸ. ಎಸ್ ಕವಿತೆ-ಪ್ರೀತಿಯ ರಾಯಭಾರಿ

ಕಾವ್ಯ ಸಂಗಾತಿ( ವಿದ್ಯಾರ್ಥಿ ವಿಭಾಗ)

ಮಾನಸ. ಎಸ್

ಪ್ರೀತಿಯ ರಾಯಭಾರಿ

ಪ್ರೀತಿಯ ನರ್ತನ ನನ್ನ
ಪದಗಳಿಗೆ ನೀಡಿತ್ತು ಆಮಂತ್ರಣ
ತೋರಿಸಲು ಪ್ರೀತಿಯ ತಲ್ಲಣ..
ಹೊರಡಲು ಪ್ರೀತಿಯ ರಾಯಭಾರಿಗೆ…

ತುಂಟಾಟತನದಿ ಸಮೀಪಿಸುತ
ಅನುರಾಗದ ಲಜ್ಜೆಯನಿಟ್ಟು
ಹೃದಯಕ್ಕೆ ಪ್ರೇಮವಕೊಟ್ಟು
ಆಹ್ವಾನಿಸಿದಳು ಪ್ರೀತಿಯ ರಾಯಭಾರಿಗೆ…

ಕೋಪವನು ಅಂಧಕಾರಮಾಡಿ
ಸೆಳೆದೆಬಿಟ್ಟಳು ಪ್ರೀತಿಯ ಬಲೆಗೆ..
ಕೊಂದೆಬಿಟ್ಟಳು ನನ್ನ ಮೆಲ್ಲಗೆ
ಪ್ರೀತಿಯ ರಾಯಭಾರಿಗೆ ಹೊರಡುತ…

ನಿನ್ನ ಕಂಡ ಒಡನೆ ಕಲರವ
ನನ್ನ ಮನವು ಅಲ್ಲೇ ತಳಮಳ..,
ನೀ ಒಪ್ಪಿಗೆ ಕೊಟ್ಟು ಸಮಾಗಮ
ನಡೆಯಿತು ಪ್ರೀತಿ ರಾಯಭಾರಿಯ ಸಮ್ಮಿಲನ…


ಮಾನಸ. ಎಸ್

Leave a Reply

Back To Top