ಕಾವ್ಯ ಸಂಗಾತಿ
ಮಾರುತೇಶ್ ಮೆದಿಕಿನಾಳ
ಈ ಜೀವನದಾಗ
ಈ ಜೀವನದಾಗ ನೆಮ್ಮದಿ ಸಿಗಲಿಲ್ಲೋ ನಮಗ
ಅತಿಯಾಸೆ ಬಯಕೆ ಈ ಬದುಕಿನೊಳಗ
ಸುಖ ಸಂತೋಷ ಸಿಗುವುದು ಯಾವಾಗ
ನಾವಿದ್ದೇವೆ ಬೇಕು ಬೇಕೆನ್ನುವ ಭ್ರಮೆಯೊಳಗ!
ಇದ್ದ ಸಿಕ್ಕಿದ್ದರೊಳಗೆ ಸಂತೃಪ್ತಿ ಸಮಾಧಾನವಿಲ್ಲ
ನಮ್ಮ ಆಸೆ ಆಕಾಂಕ್ಷೆಗಳಿಗೆ ಮಿತಿಯೇ ಇಲ್ಲ
ಇನ್ನೂ ಎನ್ನುವ ನಮಗೆ ಸಂತೃಪ್ತಿ ಸಿಕ್ಕಿಲ್ಲ
ಕುಂದು ಕೊರತೆ ತೊಂದರೆಗಳು ಕೊರಿತಾವಲ್ಲ!
ಏನಿದ್ದರೂ ಕಷ್ಟ ನಷ್ಟ ನೋವು ದುಃಖ ತಪ್ಪಲಿಲ್ಲ
ಇದ್ದುದರಲ್ಲಿ ಖುಷಿ ಪಡುವ ಬುದ್ದಿ ಬರಲಿಲ್ಲ
ಸ್ಪರ್ಧೆಯ ಗದ್ದಲದೊಳಗೆ ಬಿದ್ದವರು ನಾವೆಲ್ಲ
ಇರುವಷ್ಟು ದಿನದೊಳಗೆ ಅರಿವು ಬರಲಿಲ್ಲ!
ಇರುವುದೆಲ್ಲವೂ ಈ ನಮ್ಮ ಮನಸಿನೊಳಗ
ಕಲ್ಪಿಸಿಕೊಂಡಂತೆ ಕಾಣುತ್ತದೆ ಅನುಭವದಾಗ
ಬುದ್ಧಿವಂತರು ನಾವು ಎಲ್ಲ ಪ್ರಾಣಿಯೊಳಗ
ವಾಸ್ತವ ಅರಿಯೋಣ ಜೀವಂತ ಇರೋದರೊಳಗ!
ಮಾರುತೇಶ್ ಮೆದಿಕಿನಾಳ
ಕವಿತೆ ತುಂಬಾ ಚೆನ್ನಾಗಿದೆ.