ಗುಣಾಜೆ ರಾಮಚಂದ್ರ ಭಟ್ ಕವಿತೆ-

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ತೋಟ ಸಿರಿ

ಹೂವಿನ ತೋಟವು ನೋವನು ಮರೆಸಲು
ನಾವಿರುವಲ್ಲಿ ನಗುತಿರಲಿ..

ಹಣ್ಣಿನ ನಂದನ ಕಣ್ಣನು ತುಂಬಲು
ಮಣ್ಣಿನ ಕೊಡುಗೆ ನಮಗಿಹುದು.

ಹೊಲದಲಿ ಕಳವೆಯ ಚೆಲುವನು ನೋಡಲು
ನಲಿವಿನ ಸುಗ್ಗಿ ನಳನಳಿಸಿ ..

ಕಂಗಿನ ತೋಟದಿ ರಂಗಿನ ಫಲಗಳ
ಕಂಗಳ ಸೆಳೆವ ಹರುಷವಿದೆ.

ಪೂಗದ ಬನದಲಿ ಸಾಗಲು ಸಂತಸ
ಬೇಗೆಯ ತಡೆವ ನೆರಳಿರಲು..

ಬಗೆ ಬಗೆ ಬಣ್ಣದ ಸೊಗಸಿನ ಕುಸುಮದ
ನಗೆಯನು ನೋಡಿ ಹರುಷವಿದೆ ..

ಚೆಲುವಲಿ ಮನಸಿಗೆ ನಲಿವಿದೆ ತಿಳಿಯಿರಿ
ಬಳಲಿಕೆ ನೀಗೆ ಹಸಿರಸಿರಿ.

ನಂದನ =ತೋಟ,ಕಳವೆ=ಬತ್ತ, ಪೂಗ =ಅಡಕೆ,ಬೇಗೆ=ತಾಪ,ದುಃಖ; ನೀಗೆ=ನಿವಾರಿಸಲು.


ಗುಣಾಜೆ ರಾಮಚಂದ್ರ ಭಟ್


Leave a Reply

Back To Top