ಡಾ ಅನ್ನಪೂರ್ಣ ಹಿರೇಮಠ ಕವಿತೆ-ನಾ ಕಂಡ ಕನಸು

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ನಾ ಕಂಡ ಕನಸು

ನಡುರಾತ್ರಿಲೊಂದು ಕನಸು ಕಂಡಂಗೆ
ಬೆಚ್ಚಿಬಿದ್ದು ಬೆದರಿ ಎದ್ದು ಕುಂತಂಗೆ
ಕಾಣದ್ದು ಕಂಡಂಗೆ ಕೇಳಿದ್ದು ಕೇಳಿದಂಗೆ
ಏನೇನು ಕತೆ ಕಣ್ಮುಂದೆ ನಿಂತಂಗೆ//

ರಾಜರಾ ಒಡ್ಡೋಲಗದಲಿ ನಾನಿದ್ದೆನಂತೆ
ರತ್ನಖಚಿತ ಸಿಂಹಾಸನದಲಿ ಆಸೀನಳಂತೆ
ಬಂಗಾರದ ಕಿರೀಟ ತೊಟ್ಟಿದ್ದೆನಂತೆ
ಆಚೀಚೆ ಚಾಮರವಾ ಬೀಸುತ್ತಿದ್ದಂತೆ//

ರಾಜಗಾಂಭೀರ್ಯದಿ ನಾ ಕುಂತಿದ್ದೆನಂತೆ
ಆಳುಕಾಳು ಪರಿಚಾರಕರು ಸುತ್ತು ನಿಂತಂತೆ
ಒಬ್ಬೊಬ್ಬರಿಗೆ ಒಂದೊಂದು ಕೆಲಸ ಹೇಳುತ್ತಿದ್ದಂತೆ
ಆಜ್ಞೆ ಮಹಾರಾಣಿಯರೆ ಎಂದು ಕೇಳುತ್ತಿದ್ದಂತೆ//

ನನ್ನ ಉಡುಗೆ ತೊಡುಗೆ ಅಪ್ಸರೆಯಂತೆ
ನನ್ನ ಮನವು ಖುಷಿಯಿಂದ ಬೀಗುತ್ತಿದ್ದಂತೆ
ಸ್ವರ್ಗ ಮೂರೇ ಗೇಣು ಇದೆ ಎಂದೆನಿಸಿದಂಗೆ
ತೇಲಾಡುತ್ತಿದ್ದಂತೆ ಸಂತಸದ ಕಡಲಿನಲಿ//

ಮರುಕ್ಷಣವೇ ಕಣ್ಣುಜ್ಜಿಕೊಂಡು ಎದ್ದೆ
ಚಾಪೆಯ ಮೇಲಿದ್ದೆ ಕಣ್ತೆರೆದಾಗ
ಇದ್ದದ್ದೆಲ್ಲ ಒಮ್ಮೆ ಮಾಯವಾದಂಗೆ
ಹೊದ್ದದ್ದು ಕೊಡವಿ ನಡೆದಿದ್ದೆ ಅಡುಗೆ ಮನೆಗೆ//

—————————


ಡಾ ಅನ್ನಪೂರ್ಣ ಹಿರೇಮಠ

6 thoughts on “ಡಾ ಅನ್ನಪೂರ್ಣ ಹಿರೇಮಠ ಕವಿತೆ-ನಾ ಕಂಡ ಕನಸು

  1. ಕನಸುಗಳ ಕಂಡಂತೆ
    ಜೀವನವು ಇಲ್ಲವಂತೆ.

    ನಿಮ್ಮ ಕವನ ತುಂಬಾ ಸೊಗಸಾಗಿದೆ ಮೇಡಂ.
    ಅಭಿನಂದನೆಗಳು.

  2. ರಾಜರ ಒಡ್ಡೋಲಗದಲ್ಲಿ ಇರುವಂತೆ ಕನಸಿನ ಭಾಸವು ಸುಂದರ ♦️♦️♦️♦️♦️

    1. ಕಣ್ಮುಚ್ಚಿ ವಿರಮಿಸಿದರೆ ಸಾಕು
      ಸುಪ್ತಮನಸ್ಸನ್ನು ಸಪ್ತಸಾಗರದಾಚೆಗೂ
      ಕೊಂಡೊಯ್ಯುವ ಕನಸುಗಳ
      ರಂಗುರಂಗಿನ ಮಾಯಾಲೋಕ,
      ಮೆಲೋಡ್ರಾಮಾ!
      ಕಣ್ಣತೆರೆದು ಎಚ್ಚರವಾದರೆ,
      ನೆಲದಲ್ಲಿ ಚಾಪೆ, ಕೌದಿಯ
      ಮೇಲೊದ್ದು ಮಲಗಿರುವ ವಾಸ್ತವ!

      ಕವಿತ್ರಿ ಡಾ|| ಅನ್ನಪೂರ್ಣ ಹಿರೇಮಠ ಇವರಿಗೆ ಧನ್ಯವಾದಗಳು.

Leave a Reply

Back To Top