ಕಾವ್ಯ ಸಂಗಾತಿ
ಸುಧಾ ಹೊಳ್ಳ
ಕಾರಣವಾದಳು
ಸಭೀಕರೆಲ್ಲರ ಮುಂದೆ
ಸಾವನರಿಯದೆ ದುರುಳ
ಸಿಂಹಿಣಿಯ ಎಳೆದು ತರುತಿರೆ
ಸೀರೆಯ ಹಿಡಿದು
ಸುಗುಣೆಯವಳು ತಪ್ಪೇನಿಹುದು
ಸೂಚನೆಯ ಕೊಟ್ಟರೂ ಬಿಡದೆ ಎಳೆವಾಗ
ಸೃಗವಿಲ್ಲ ಕೈಯಲ್ಲಿ ನಿರಾಯುಧಳವಳು
ಸೆರಗ ಎಳೆಯುವಿಕೆಯಿಂದ ನೊಂದು
ಸೇಡಲಿ ಉರಿದಳಾಕೆ
ಸೈ ಎಂದು ಮೆರೆಯುತಿಹ ದುಷ್ಟರ ಕಂಡು
ಸೊಣಗರ ಕಾರ್ಯಕ್ಕೆ ಮರುಗಿ
ಸೋತು ಮಾಧವನ ಜಪಿಸೆ
ಸೌಭಾಗ್ಯವತಿಯ ರಕ್ಷಣೆಗೆ ಒಲಿದ ಆ ಕೃಷ್ಣ
ಸಂಕೇತವಾದಳು ನಾರಿ ಮುಂದಿನ ಸಂಹಾರಕ್ಕೆ
ಸುಧಾ ಹೊಳ್ಳ