ಪ್ರಭಾವತಿ ಎಸ್ ದೇಸಾಯಿ-ಗಜಲ್ (ಮಾತ್ರೆ೨೩)

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಜಲ್ (ಮಾತ್ರೆ೨೩)

ಅವಳ ತನು ಕಂಪು ತೇಲಿಬಂದಿತು ಅವಳು ಬರಲಿಲ್ಲ
ಹೆಜ್ಜೆಯ ನೂಪುರ ದನಿಯುಕೇಳಿತು ಅವಳು ಬರಲಿಲ್ಲ

ಪೂರ್ಣ ಚಂದಿರ ನಗುತಿರುವ ನನ್ನ ಒಂಟಿತನ ನೋಡಿ
ಜೊತೆಯಲಿ ಇರಲು ಮನ ಹಂಬಲಿಸಿತು ಅವಳು ಬರಲಿಲ್ಲ

ಮೋಹದಲಿ ಅರಮನೆ ಕಟ್ಟಿ ಕಾಯುತಿರುವೆ ಸಿಂಗರಿಸಿ
ಹೃದಯ ಕೋಗಿಲೆಯು ಹಾಡಿಕರೆಯಿತು ಅವಳು ಬರಲಿಲ್ಲ

ವಿರಹದ ಕುಲುಮೆಯಲ್ಲಿ ಬದುಕು ಸುಟ್ಟು ಸುಣ್ಣವಾಗಿದೆ
ಜೀವ ಇರುಳೆಲ್ಲಾ ಕನವರಿಸಿತು ಅವಳು ಬರಲಿಲ್ಲ

ಬಾಳ ಸಂಗಾತಿಯಾಗಲೆಂದು ಧ್ಯಾನಿಸುತ ಕುಳಿತೆ
ಶಶಿ”ಪ್ರಭೆ”ಯು ಕರಗಿ ಬೆಳಕಾಯಿತು ಅವಳು ಬರಲಿಲ್ಲ.


4 thoughts on “ಪ್ರಭಾವತಿ ಎಸ್ ದೇಸಾಯಿ-ಗಜಲ್ (ಮಾತ್ರೆ೨೩)

Leave a Reply

Back To Top