ಕಾವ್ಯ ಸಂಗಾತಿ
ರೇಖಾ ಸುದೇಶ್ ರಾವ್
ಸೆಳೆತ
ಪ್ರೀತಿಯ ಸೆಳೆತವು ಸುಮಧುರ
ನೈಜತೆ ತುಂಬಿದ ಪ್ರೇಮ ಅಮರ
ಇನಿಯನ ಕುಡಿ ಮೀಸೆ ಸುಂದರ
ಮೋಹದ ಬಲೆಯಲ್ಲಿ ಕಟ್ಟಿರಲು ಹಾರ
ಸ್ನೇಹದ ಸೇತುವೆಯ ತೋರಣ
ಚೆಲ್ಲಲು ಭರವಸೆ ಆಕಾಂಕ್ಷೆ ಹೂರಣ
ಒಬ್ಬರೆಂದರೆ ಒಬ್ಬರಿಗೆ ಪ್ರಾಣ
ಇಂದು ನಿನ್ನೆಯದಲ್ಲ ಈ ಪ್ರೇಮ ಪಯಣ
ಮಾತಿನ ಮಲ್ಲ ನಿಪುಣ ಕಲೆಗಾರ
ನಿನದೆ ನೆನಪು ಕಾಡಿದೆ ನಿರಂತರ
ಭಾವನೆ ಕಲ್ಪನೆ ಮನೋಹರ
ಸ್ಪರ್ಶದಲ್ಲಿ ಮನ ತಲ್ಲಣ ಕೊರಳಿಗೆ ಹಾರ