ಪರಿಮಳ ಎನ್ ಎಂ ಐವರ್ನಾಡು ಕವಿತೆ- ಜೀವಂತ ಬೊಂಬೆಗಳು

ಕಾವ್ಯ ಸಂಗಾತಿ

ಪರಿಮಳ ಎನ್ ಎಂ ಐವರ್ನಾಡು

ಜೀವಂತ ಬೊಂಬೆಗಳು

ಸುಂದರ ಜಗದಲಿ
ಉಗ್ರರ ನರ್ತನವ
ಎದುರಿಸದೆ ಬಲಿಯಾಗಿವೆ
ಜೀವಂತ ಬೊಂಬೆಗಳು

    ದುಷ್ಟ ರಾಜಕೀಯದಲಿ
    ಭರವಸೆಗಳ ಮಳೆಯಲಿ
    ಆಸೆಯಲಿ ತೇಲುತಿವೆ
    ಸಜೀವಿ ಬೊಂಬೆಗಳು

ಕಾಮುಕರ ಮುದ್ದು ಮಾತಲಿ
ತೋರಿಕೆಯ ಸಲ್ಲಾಪಗಳಲಿ
ಮಾನ ಕಳೆದುಕೊಂಡಿವೆ
ಮುಗ್ಧ ಬೊಂಬೆಗಳು

    ಸಜ್ಜನರ ಮುಖವಾಡದಲಿ
    ಮೆರೆಯುತಿಹ ಹೀನರ
    ಸೂತ್ರದಾರಿಕೆಗೆ ಸೆರೆಯಾಗಿವೆ
    ಕೀಲಿ ಬೊಂಬೆಗಳು

ಉಸಿರಾಡುವ ಬೊಂಬೆಗಳ
ವಿವಿಧ ವೇಷಗಳಾಟದಲಿ
ಮೂಖ ಪ್ರೇಕ್ಷಕವಾದುವಲ್ಲಾ
ನಿರ್ಜೀವ ಬೊಂಬೆಗಳು


ಪರಿಮಳ ಎನ್ ಎಂ ಐವರ್ನಾಡು

2 thoughts on “ಪರಿಮಳ ಎನ್ ಎಂ ಐವರ್ನಾಡು ಕವಿತೆ- ಜೀವಂತ ಬೊಂಬೆಗಳು

Leave a Reply

Back To Top