ಸುಧಾ ಪಾಟೀಲ ಕವಿತೆ-ಕಾವ್ಯ ಕುಲುಮೆ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಕಾವ್ಯ ಕುಲುಮೆ

ಉಸಿರಿನ ಪ್ರತಿ ಕ್ಷಣವೂ ನಿನ್ನ
ಜಪದಲ್ಲಿ
ಹೃದಯದ ಪ್ರತಿ ಬಡಿತವೂ
ನಿನ್ನ ನೆನಪಲ್ಲಿ
ನರ ನಾಡಿಗಳು ಪ್ರತಿ ಮಿಡಿತದಲಿ
ನಿನ್ನ ಸ್ನೇಹ ಪ್ರೀತಿ ಚಿಲುಮೆ
ಮನಸಿನ ಪ್ರತಿ ಕನವರಿಕೆಯೂ ನಿನ್ನ ನಾಮಾವಳಿಯಲ್ಲಿ
ಮಾತಿನ ಪ್ರತಿ ಶಬ್ದವೂ
ನಿನ್ನ ಕಾವ್ಯ ಕುಲುಮೆಯಲ್ಲಿ

ಅನುದಿನವೂ ಅನುಗಾಲ
ಬಾಳಲೊಂದು ದಾರಿ
ಚೈತನ್ಯದಿಂದಿರಲು ಒಂದು
ಜೀವ ಪಥ
ಮುಂದೆ ಸಾಗಲೊಂದು ಮಾರ್ಗದರ್ಶನ
ಎಡೆಬಿಡದೆ ಕೈತೋರುವ
ಅಪರೂಪದ ಹರಿಕಾರ
ಒಲವು ತೋರಿದ
ಹೃದಯ ಕೋಟೆಯ
ಸಾಮ್ರಾಟ
ನಲುಮೆಯ ಮಾತಿನಲ್ಲಿ
ಮನ ಸೋರೆಗೊಳ್ಳುವ
ಗುರಿಕಾರ
ನಿನಗೆ ನನ್ನ ಭಾವ ಅರ್ಪಣೆ


ಸುಧಾ ಪಾಟೀಲ ಬೆಳಗಾವಿ

2 thoughts on “ಸುಧಾ ಪಾಟೀಲ ಕವಿತೆ-ಕಾವ್ಯ ಕುಲುಮೆ

Leave a Reply

Back To Top