ಮಾರುತೇಶ್ ಮೆದಕಿನಾಳ-ಓ ಹೂವೆ……!!!

ಕಾವ್ಯ ಸಂಗಾತಿ

ಮಾರುತೇಶ್ ಮೆದಕಿನಾಳ

ಓ ಹೂವೆ……!!!

ಗಿಡದೊಳಗಿನ ಹೂಗಳ ಹರಿದು ಕಿತ್ತು ಕಿತ್ತು
ಮನುಷ್ಯ ತಂದ ಅವುಗಳಿಗೆ ಆಪತ್ತು
ಹಾರಮಾಡಿ ಮತ್ತೆ ಹೆಣ್ಣ ಮುಡಿಗೆ ಇಟ್ಟು
ಅರಳಿದ ಹೂವಿಗೆ ಬಾಡಿಸಿ ತಂದನು ಕುತ್ತು!

ಆ ದೇವರ ಪೂಜೆಗೆ ಹೂವ್ವೆ ನೀನೇ ಬೇಕಂತೆ
ಮದುವೆ ಮಂಟಪಕೂ ನಿನ್ನದೇ ಸಿಂಗಾರವಂತೆ
ಮಸಣ ಸೇರುವ ಸತ್ತ ಹೆಣಕ್ಕು ಹೂವಿನ ಚಿಂತೆ
ಅತಿಥಿಗಳ ಸ್ವಾಗತ ಆಗಮನಕ್ಕೆ ಹೂ ಚೆಲ್ಲಬೇಕಂತೆ!

ಸರಸ ಸಲ್ಲಾಪ ಪ್ರೇಮಕ್ಕೂ ಬೇಡಿಕೆ ಈ ಹೂವಿಗೆ
ಮಧುಚಂದ್ರ ಪ್ರಥಮರಾತ್ರಿಗೆ ಹೂವಿನ ಹಾಸಿಗೆ
ಎಲ್ಲಿಂದರಲ್ಲಿ ಚೆಲ್ಲಿಸಿಕೊಂಡು ತುಳಸಿಕೊಂಡಿದೆ
ಈ ಹೂವಿನ ಜೀವನವೇ ಹೀಗೆ ಹಾಳಾಗಿದೆ!

ಓ ಹೂವೆ ನಿನ್ನ ಬಗ್ಗೆ ದೇವರಿಗೆ ಕರುಣೆ ಇಲ್ಲವೇ
ಅರಳಿ ನಿನ್ನಂದ ಸುಗಂಧ ಸೂಸಿದರೆ ಸಾವೇ
ನಿನ್ನ ಮರಣಕ್ಕೆ ಸೌಂದರ್ಯ ರೂಪ ಕಾರಣವೇ
ಯಾರು ನಿನಗೆ ಅನುಕಂಪ ತೋರುವುದಿಲ್ಲವೇ!


Leave a Reply

Back To Top