ಕಾವ್ಯ ಸಂಗಾತಿ
ರಾಹುಲ ಮರಳಿ
ಗಜಲ್
ಪರೋಪಕಾರ ಮಾಡುವ ಮನುಷ್ಯರಿಗೆ ಎಲ್ಲಿದೆ ನೆಮ್ಮದಿ
ಸಂತಸ ಹಂಚಲು ಹೊರಟ ಸಂತರಿಗೆ ಎಲ್ಲಿದೆ ನೆಮ್ಮದಿ
ಪ್ರೀತಿಯೆಂಬ ಹಾಲಿನಲ್ಲಿ ಹಾಲಾಹಲದ ಅಂಶ ಕಾಣುತ್ತಿಲ್ಲ
ಜಗವನೇ ಅರಿಯದ ಮುಗ್ಧ ಮನಸುಗಳಿಗೆ ಎಲ್ಲಿದೆ ನೆಮ್ಮದಿ
ಸ್ವಾರ್ಥಕ್ಕಾಗಿ ಸ್ವಾಭಿಮಾನವನ್ನೇ ಅಡವಿಡುತ್ತಿದ್ದಾರೆ ನಮ್ಮ ಜನ
ಬೆರಳೆಣಿಕೆಯ ನೈಜ ಪ್ರಮಾಣಿಕರಿಗೆ ಎಲ್ಲಿದೆ ನೆಮ್ಮದಿ
ಹೆತ್ತವರೊಡಲಿಗೆ ಬೆಂಕೆ ಹಾಕಿ ಹಾಯಾಗಿ ಕುಳಿತಿಹರು ದೇವ
ಪ್ರೀತಿ ಪ್ರೇಮ ಮೋಸದ ಬಲೆಗೆ ಬಿದ್ದವರಿಗೆ ಎಲ್ಲಿದೆ ನೆಮ್ಮದಿ
ಮೋಕ್ಷವೇ ನಿರ್ಣಾಯಕ ನಿಶ್ಚಿಂತ ನೆಮ್ಮದಿಯ ಜೋಳಿಗೆ ಜೀವಕವಿ
ಜೀವಂತವಿರುವವರೆಗೂ ಜೀವಿಗಳಿಗೆ ಎಲ್ಲಿದೆ ನೆಮ್ಮದಿ..