ಕಾವ್ಯ ಸಂಗಾತಿ
ವಿದ್ಯಾ ಶಂಕರಿ ಸುಳ್ಯ
ಬದುಕು
ಬದುಕಿನ ಬವಣೆ ಹೊತ್ತಿ ಉರಿಯುತ್ತಲಿದೆ
ತನ್ನ ಕೆನ್ನಾಲಿಗೆಯ ಚಾಚಿ …..
ಎಲ್ಲಿ ಹಾರೀತು ಮರಿದುಂಬಿ ಸಂತಸದಿ
ಇನ್ನು ತನ್ನ ರೆಕ್ಕೆಯ ಬಿಚ್ಚಿ …..
ಕಾಲರಾಯನೇ ….ನೀನಿರುವೆಯೆಂದೇ
ಕಾದೆ …ಕಾದೇ ….ನೋವ ಮರೆಮಾಚಿ ….
ಎದೆ ಸೀಳುವ ನೋವು ಕುದಿಯುತ್ತಲಿದೆ ….
ಆ ಕೃತಕ ನಗೆಯ ಬೀರಿ ….ಮರೆಮಾಚಿದೆ….
ಹೇ ಜಗನ್ನಿಯಾಮಕನೇ ….ಯಾಕೀ ಪರೀಕ್ಷೆ ?
ನಿನ್ನ ಕೂಸಿಗೆ ನೀ ನೀಡುವೆಯಲ್ಲವೇ ರಕ್ಷೆ ….?
ಯುಗದ ಆದಿಯ ದಿನ ಹೊಸ ಕನಸು ಮೂಡುವುದೇ …?
ತಾಳ್ಮೆಯಿಂದ ಕಾಯುವೆ …ಹೊಸ ಕನಸ ಚಿಗುರಿಗಾಗಿ …
————