ಕಾವ್ಯ ಸಂಗಾತಿ
ಅನನ್ಯ ಎಚ್ ಸುಬ್ರಹ್ಮಣ್ಯ
ಅರಿತು ಬಿಡು ಜಗವ
ಪ್ರಶಾಂತವಾದ ಗಿಡ ಲತೆಯ ನಡುವಿನಲ್ಲಿ
ಮನಸಿನ ಭಾವನೆ ಹಸಿರಿನ ಚಿಲುಮೆಯಲ್ಲಿ
ಹಂಗಿರದೆ ಬೀರಿದ ನಗೆಮಿಂಚಿನಲ್ಲಿ
ಮೌನವಾದೆ ನಕಾರಾತ್ಮಕ ಚಿಂತನೆಯಲ್ಲಿ
ಹೊಸಕಾಲದ ಹೊಲಸು ತುಳಿದು
ಭರವಸೆಗಳ ಅನಾಹುತ ನೆನೆದು
ತವಕದ ಕಂಬನಿಯ ಅಳೆದು
ಕ್ರೂರ ನರ್ತನವಾಗಿದೆ ಇಂದು
ತಾಳ್ಮೆ ಇಲ್ಲದೆ ಹೆಣೆದಿದೆ ಮನಸ್ಸು
ಅಳಿವಿನಂಚಿನಲ್ಲಿ ಮರೆಯಾಗಿದೆ ಕನಸು
ಜಗದೊಳಗೆ ಸಿಗುತ್ತಿಲ್ಲ ಹುಮ್ಮಸ್ಸು
ಬದಲಾವಣೆಯಲ್ಲಿ ನಾನಾದೆ ಕೂಸು
ಕ್ಷಣ ಕ್ಷಣದಲ್ಲಿ ತಪ್ಪುತ್ತಿದೆ ನಿಯಂತ್ರಣ
ದವಾಖಾನೆಯತ್ತ ಸಾಗುತ್ತಿದೆ ಪಯಣ
ನೀರಿನಂತೆ ಹರಿದು ಹೋಗುತ್ತಿದೆ ಹಣ
ಕೊನೆಯಾಗುತ್ತಿರುವ ಜೀವಕ್ಕೆ ಬೇಕಿದೆ ಕಡಿವಾಣ .
ಅನನ್ಯ ಎಚ್ ಸುಬ್ರಹ್ಮಣ್ಯ