ಗಾಯಿತ್ರಿ ಮೋನಪ್ಪ ಬಡಿಗೇರ ಕವಿತೆ-ಅನಾವರಣ

ಕಾವ್ಯ ಸಂಗಾತಿ

ಗಾಯಿತ್ರಿ ಮೋನಪ್ಪ ಬಡಿಗೇರ

ಅನಾವರಣ

ಆಳ ತಿಳಿಯದೆ ತೀರ ಕಾಣದೆ
ಹರಿಯುತ್ತಿರುವ ನದಿಯಲ್ಲಿ
ಅಲೆಯುತ್ತಿರುವ ಪರದೆ ಸರಿಸಿ
ಕೈಬೇರಳ ಚುಮುಕಿಸಿ
ಮಿಂಚಿನಂತೆ ಮಿನುಗುವ ಮೀನಿನ ರಾಶಿ
ಗೋಚರಿಸಿ ಹೋಳಪಿನಂತೆ ಹೊಳಪಿಸಿ
ಅನಾವರಣ ಗೋಚರಿಸಿದ ಅದ್ಬುತ

ಕೈಬೀಸಿ ಈಜಿ ಮುಳುಗಿದಾಗ
ಗಳಗಳ ಶಬ್ದದ ನಾದ ಕೇಳಿದಾಗ
ಕಾಲ ಪಾದಿಗೆ ಮರಳು ಸೋಕಿದಾಗ
ಮಿಂಚುಳಿ ಮೀನುಗಳು ಪರದೆಯಂತೆ ಸರೆದಾಗ
ಬಣ್ಣದ ಕಲ್ಲುಗಳು ಕಲಾಕೃತಿ ಮೀರಿದಾಗ
ಬತ್ತದ ಶಶಿಯಂತೆ ಗರಿಕೆ ಹುಲ್ಲು ಕಂಗೋಳಿಸಿದಾಗ
ಅನಾವರಣ ಸೃಷ್ಟಿಸಿದ ಅದ್ಭುತ

ಕಲ್ಲು ಸರಿಸಿ ಸಿಂಪೆಗಳ ಹುಡುಕಿ
ಸಿಂಪೆಗಳ ಪರದೆ ತೆಗೆದುಹಾಕಿ
ಅಲ್ಲಿನ ಮುತ್ತು ಪ್ರಕಾಶಿಸುವ ವಜ್ರಕ್ಕೆ ಹೋಳಿಕೆ
ಹವಳಗಳ ಹೋಳಪ್ಪಿನ ಶೃಂಗಾರಕೆ
ಮುತ್ತಿನ ಹಾರಿಗೆ ನಾರಿಯ ಬೇಡಿಕೆ
ತೆರೆಯಮೇಲೆ ಅನಾವರಣಗೊಂಡ ನಾರಿಯ ಶೃಂಗಾರ
——————————

ಗಾಯಿತ್ರಿ ಮೋನಪ್ಪ ಬಡಿಗೇರ

Leave a Reply

Back To Top