ಕಾವ್ಯಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
.
ಕಾರ್ಪಣ್ಯದಿ ಬದುಕು ಗಾಳಿಪಟವಾಗಿದೆ
ಮುರಿದುಬಿಡು ಒಮ್ಮೆ
ಅರ್ಪಣೆಯ ಜೀವನ ತೆರೆದ ಪುಸ್ತಕದಂತೆ
ಹರಿದುಬಿಡು ಒಮ್ಮೆ
ನಾನಿನ್ನು ಹೊರಡುವೆ ಅಳದಿರು ಉಸಿರೇ
ಬದುಕು ಇಷ್ಟೇ ಅಲ್ಲವೇನು
ತನುವ ಕೊರಡಾಗಿಸಿ ಕೊನೆಯ ಹನಿಯನು
ಸುರಿದುಬಿಡು ಒಮ್ಮೆ
ಶಂಕಿಸದಿರು ಮನವ ಉಕ್ಕಿದ ಭಾವಗಳಿಗೆ
ತಡೆಯೊಡ್ಡುವುದು ಅಸಾಧ್ಯ
ಬೆಂಕಿಯ ಸ್ಪರ್ಶವಾಗಿದೆ ಇಲ್ಲಿ ದಗದಗನೆ
ಉರಿದುಬಿಡು ಒಮ್ಮೆ
ಸುಖದ ಲೋಲುಪತೆಯಲ್ಲಿ ಮರೆಯದಿರು
ವಾಸ್ತವತೆಯನು
ಮೂಕವೇದನೆಯ ಅನುಭವಿಸಿ ನೇಪಥ್ಯಕ್ಕೆ
ಸರಿದುಬಿಡು ಒಮ್ಮೆ
ಬಾಧೆಯನು ಸೈರಿಸಿ ಕಟುವಾಗಿರುವಳು
ರಾಧೆ
ಖೇದ ವ್ಯಕ್ತಪಡಿಸಲು ಎದೆಯ ಬಯಕೆ
ತರಿದುಬಿಡು ಒಮ್ಮೆ
ಅನುರಾಧಾ ರಾಜೀವ್ ಸುರತ್ಕಲ್
ಮನಮುಟ್ಟುವ ಗಜಲ್