ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಬದುಕು ಲೆಕ್ಕಾಚಾರ

ಬದುಕು ಕಂಡವರ ಕಣ್ಣಿಗೆ ಕಂಡಂತೆ
ಹಲವರಿಗೆ ಕೂಡು -ಕಳೆಯೋ ಆಟ
ಮತ್ತೆ ಕೆಲವರಿಗೆ ಉಂಡುಟ್ಟು ಮೆರೆಯೋ ಮಾಟ
ಬದುಕು ಲೆಕ್ಕಾಚಾರಗಳ ಕೂಟ
ಒಂದಾಣೆಗೆ ಇನ್ನೊಂದಾಣೆ ಕೂಡಿ
ಕಾಪಿಟ್ಟು ಕನಸು ಕಾಣುವ ಸಂಕಲನ
ಬದುಕಿನ ಏರಿಳಿತದೆ ಗುಣಿತಗೊಳುತ್ತ
ಬೆಸೆದಿರುವ ಸಂಬಂಧಗಳ ಆಚೆ ಮಾಡುವ ಭಾಗಕಾರ
ಬದುಕು ಸರಳ ರೇಖೆ ಯಲ್ಲ
ರೇಖಾಚಿತ್ರಗಳ ಬಣ್ಣದ ರಂಗೋಲಿ
ಕೆಲವೊಮ್ಮೆ ಸಂಕೀರ್ಣ ಗಂಟು ರಂಗೋಲಿ
ಅರಿತವರು ಬಿಡಿಸುವರು ಚಿತ್ತಾರದ ಕುಂಡಲಿ
ಕಾಲ ಸರಿದಂತೆಲ್ಲ ಮಾಗಿದ ಆಟ
ಸರಿ ಬೆಸಗಳ ಆಯವ್ಯಯದಿ ಹೂಡೋ ಹೂಟ
ಸೂತ್ರವಿರದೆ ಮಾಡುವ ಬಾಳಿನ ಲೆಕ್ಕ
ತಪ್ಪಿಸುವುದು ಸುಂದರ ಬದುಕಿನ ದಿಕ್ಕ
ಎಲ್ಲರಿಗೂ ಅವರದೇ ಅಂದಾಜಿನ ಲೆಕ್ಕ ಅಂದಾಗಲೇ ಬಾಳಿಗೆ ನೆಮ್ಮದಿಯು ಪಕ್ಕ
ಡಾ. ಮೀನಾಕ್ಷಿ ಪಾಟೀಲ್

ಬದುಕು ಬವಣೆಗಳ ಕೂಟ…
ಒಮೊಮ್ಮೆ ರಸದೂಟ…
ಸಂಬಂಧ ಗಳೆಮಂಬ ಆಟ..
ನಗಿಸಿ ನೋಡು ಬಿಟ್ಟು ನಿನ್ನ ಸ್ವಾರ್ಥ…
ಹೊಂಬೆಳಕು ನೀಡುವ ನಿಮ್ಮ ನಗು…
ಹರಡಲಿ ನಿಮ್ಮ ಮನದಾಳದ ಮಗು…
ಬರೆದಿರುವಿರಿ ನೀವು ಜೀವನದ ತಿರುಳು…
ಇರಲಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಬಹು…