ಇಂದಿರಾ ಮೋಟೆಬೆನ್ನೂರ. ಕವಿತೆ-ಸ್ಪಂದನೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ಪಂದನೆ

ಬೆಳಗುವ ಹಣತೆಗೆ
ಬೆಳಕಿನ ಸ್ಪಂದನೆ
ಭೂಮಿಗೆ ಬಿದ್ದ ಬೀಜಕೆ
ಮಳೆಯ ಸ್ಪಂದನೆ..

ಎದೆಗೆ ಬಿತ್ತಿದ ಭಾವಕೆ
ಪ್ರೀತಿಯ ಸ್ಪಂದನೆ…
ಬೆಳೆದು ನಿಂತ ಬೆಳೆಗೆ
ತಂಗಾಳಿಯ ಸ್ಪಂದನೆ…

ಮಿಡಿವ ಹೃದಯಕೆ
ಒಲುಮೆ ಸ್ಪಂದನೆ
ತುಡಿವ ಜೀವಕೆ
ಸ್ನೇಹ ಸ್ಪಂದನೆ…

ಸ್ಪಂದಿಸುವ ಹೃದಯ
ಮನಸು ಬೇಕು
ಬಿಡುವಿಲ್ಲದ ದುಡಿಮೆ
ನಡುವೆಯೂ ಕೊಂಚ

ಮುದ್ದು ಮಗು ಮೊಗದ
ಚೆಲುವಿಗೆ ನಗುವ ಸ್ಪಂದನೆ
ಬಿದ್ದು ಹೋಗುವ
ಬದುಕಿಗೆ ಭಾವ ಸ್ಪಂದನ…

ಸ್ಪಂದನೆಯೇ ಇಲ್ಲದಿರೆ
ಬಾಳೇ ಸ್ತಬ್ಧ…ನಿಶಬ್ದ….


Leave a Reply

Back To Top