ಮಹಾದೇವಿ ಪಾಟೀಲ ಕವಿತೆ-ನಾಗರಿಕ ಮಾನವ ನೀನೇ ಏನು?

ಕಾವ್ಯ ಸಂಗಾತಿ

ನಾಗರಿಕ ಮಾನವ ನೀನೇ ಏನು?

ಮಹಾದೇವಿ ಪಾಟೀಲ

ನಾಗರಿಕ ಮಾನವ ನೀನೇ ಏನು?
ತುಂಬಾ ವಿದ್ಯೆ ಕಲಿತಿರುವೆ
ವಿನಯವ ಮರೆತಿರುವೆ
ಸಾಕಷ್ಟುಹಣ ಗಳಿಸಿರುವೆ
ಮಾನವೀಯತೆ ಮರೆತು ಮೆರೆದಿರುವೆ
ತುಂಬಾ ದೊಡ್ಡ ಮನೆ ಕಟ್ಟಿರುವೆ
ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟಿರುವೆ
ಬೆಲೆಬಾಳುವ ಬಟ್ಟೆಗಳನ್ನು ತೊಡುವೆ
ಮಾನ ಮುಚ್ಚಿಕೊಳ್ಳುವುದೇ ಮರೆತಿರುವೆ
ತುಂಬಾ ಮೋಜು ಮಸ್ತಿ ಮಾಡುವೆ
ಆದರೂ ನೆಮ್ಮದಿ ಇಲ್ಲದೇ ಕೊರಗುತಿರುವೆ
ದೊಡ್ಡ ಕಾರುಗಳಲ್ಲಿ ಓಡಾಡುವೆ
ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿರುವೆ
ಪಂಚತಾರಾ ಹೊಟೇಲುಗಳಲ್ಲಿ ಊಟಮಾಡುವೆ
ಆದರೂ ಆರೋಗ್ಯ ಕಳೆದುಕೊಂಡಿರುವೆ
ಬೇರೆ ಗ್ರಹಕ್ಕೆ ಹೋಗುವಷ್ಟು ಎತ್ತರ ಬೆಳೆದಿರುವೆ
ಹತ್ತಿರ ಇದ್ದವರನ್ನು ದೂರ ತಳ್ಳಿರುವೆ
ಬಗೆ ಬಗೆಯ ಯಂತ್ರಗಳ ಆವಿಷ್ಕಾರ ಮಾಡಿರುವೆ
ದುಡಿದು ತಿನ್ನುವುದನ್ನೇ ಮರೆತಿರುವೆ..


ಮಹಾದೇವಿ ಪಾಟೀಲ

Leave a Reply

Back To Top