ಮಾಜಾನ್ ಮಸ್ಕಿಕವಿತೆ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಜಾನ್ ಪದ್ಯಗಳು

ಮಾಜಾನ್ ಮಸ್ಕಿ

ಬೇಡದ ಸಂಬಂಧಗಳಿಗೆ ಸೋಲುವುದು ಏಕೆ?
ಜಾನ್!!
ಗುಳಿ ಬಿದ್ದ ಗೋಡೆಗೆ ಏಟು ಮೆತ್ತಿದರು ಅಷ್ಟೇ

ನೋವು ಅನುಭವ ನೀಡುತ್ತಾ ಸದಾ ಜೊತೆಯಾಗಿರುತ್ತೆ
ಜಾನ್!!
ಅದಕ್ಕೆ ನಗು ಸುಂದರವಾಗಿ ಕಾಣುವುದು

ಭಾರ ಹೊತ್ತ ಹೃದಯ ಸಂಕಟ ಪಡುತ್ತಿತ್ತು
ಜಾನ್!!
ಅಂತೂ ಖಾಲಿ ಖಾಲಿ ಹೃದಯ ಹಗುರವಾಯಿತು

ನಿಯತ್ತಿನಿಂದ ಯಾರು ಜೊತೆ ಇರುವುದಿಲ್ಲ ಎಂದು ಮನ ನೊಂದಿತ್ತು
ಜಾನ್!!
ಅರಿವಾಯಿತು ಉಸಿರು ಕೂಡ ನನ್ನ ಜೊತೆ ಇರುವುದಿಲ್ಲ….


Leave a Reply

Back To Top