ಅನಿತಾ ಶೆಟ್ಟಿ ಕವಿತೆ-ನೇಸರ ಬರೆದಿಹ ಉಯಿಲು

ಕಾವ್ಯ ಸಂಗಾತಿ

ಅನಿತಾ ಶೆಟ್ಟಿ

ನೇಸರ ಬರೆದಿಹ ಉಯಿಲು

ಕನ್ನಡ ನುಡಿಯದು ನನ್ನೆದೆ ಗುಡಿಯಲಿ
ಪಂಜಿನ ತೆರದಲಿ ಬೆಳಗುವುದು
ಚಿನ್ನದ ರಥವದು ಗಮ್ಯದ ಪಥದಲಿ
ಮಿಂಚಿನ ಬಿರುಸಲಿ ಸಾಗುವುದು

ರಸ ಋಷಿ ಕವಿಗಳು ಮೆರೆದಿಹ ಕಲಿಗಳು
ಬಾಳಿದ ಬದುಕಿದ ಬೀಡು ಇದು
ಪದವದು ಪದಕವು ನುಡಿಯಲು ಪುಳಕವು
ಪಾವನ ಜನನದ ನಾಡು ಇದು

ಬಣ್ಣದ ಅಂಬರ ಹುಣ್ಣಿಮೆ ಚಂದಿರ
ತಣ್ಣನೆ ಬಾಗಿದ ಬಿಂಬನುಡಿ
ಇಬ್ಬನಿ ಚೆಲುವಲಿ ತಬ್ಬಿದ ಒಲವಲಿ
ತೇರನೆ ಏರಿದ ನಾಡನುಡಿ

ಹಾಲಿನ ಸವಿಯಲಿ ಜೇನಿನ ಸಿಹಿಯಲಿ
ಮೀಯುತ ಮಿಡಿದಿದೆ ಹಸನಾಗಿ
ನಾಳಿನ ಭಾವಕೆ ಹಸಿದಿದೆ ಪೀಳಿಗೆ
ದೀವಿಗೆ ಉರಿದಿದೆ ನವಿರಾಗಿ

ಮನಸಿನ ಮಗುವಿನ ಕನಸಿನ ನಗುವಲಿ
ನೇಹದ ಬಂಧಕೆ ಮಹಲು ಇದು
ಸಾಗರದಾಚೆಗೂ ಮೀರಿದ ಬೆಳಕಲಿ
ನೇಸರ ಬರೆದಿಹ ಉಯಿಲು ಇದು

ಅನಿತಾ ಶೆಟ್ಟಿ

         











 

2 thoughts on “ಅನಿತಾ ಶೆಟ್ಟಿ ಕವಿತೆ-ನೇಸರ ಬರೆದಿಹ ಉಯಿಲು

Leave a Reply

Back To Top