ಡಾ ಡೋ.ನಾ.ವೆಂಕಟೇಶ-ಮುಗುಳ್ನಗು

ಕಾವ್ಯಸಂಗಾತಿ

ಮುಗುಳ್ನಗು

ಡಾ ಡೋ.ನಾ.ವೆಂಕಟೇಶ

ದುಃಖ ಉಮ್ಮಳಿಸಿ ಬಂದಾಗ
ಮುಗಳ್ನಗು ಚಿನ್ನಾ
ಹಮ್ಮು ಹೆಮ್ಮಾರಿಯಾಗಿ ನಿಂತಾಗ
ಮತ್ತೆ ಮತ್ತೆ ನಗು ಚೆನ್ನ!
ಹೀಗೆ ನಗು –
ಬುದ್ಧ ಧ್ಯಾನಿಸುತ್ತ ಕಣ್ರೆಪ್ಪೆ ಮುಚ್ಚಿದಾಗಿನ ನಗು
ಅರೆತೆರೆದಾಗಿನ ಮುಗುಳು ನಗು ಅದೆ ಹೊನಲು

ಮುಗುಳ್ನಗಲು ಬೇಕು ಸದಾ
ಸದ್ವಿಚಾರ ಸತ್ಸಂಗದ ಹವಾ!
ನಗಲೂ
ಬೇಕು ಧೃಢ ಮನಸ್ಸು
ಧೃಢ ಚಿತ್ತ ಮತ್ತೆ
ಮತ್ತೆ ಕ್ಷಮಾಗುಣದ
ಅಕ್ಷಯ ಪಾತ್ರ

ಹೌದು ನಕ್ಕರೆ ಬೆಳದಿಂಗಳು
ನಾಚುವಂತಿರ ಬೇಕು
ಮಧ್ಯಾಹ್ನ ಸೂರ್ಯನ ತಾಪ
ತಣ್ಣಗಾಗುವಂತಿರ ಬೇಕು
ಮತ್ತು
ನಕ್ಕರೆ ಆ ದೂರ್ವಾಸ ಮುನಿ
ಅಹುದಹುದೆನ ಬೇಕು

ನಕ್ಕರೆ ಇವಳ ಬಾಯ್ತುಂಬ ಸಕ್ಕರೆ
ನಕ್ಕರೆ ಇವಳ ಕನಸಲ್ಲು ನನಸಲ್ಲು ನಮಗೆಲ್ಲ
ಅಕ್ಕರೆ
ಮುಗುಳ್ನಕ್ಕರೆ ನಮಗೆಲ್ಲ ಆಸರೆ
ಅರವಟ್ಟಿಗೆ
ಅರಮನೆ!!

—————-

ಡಾ ಡೋ.ನಾ.ವೆಂಕಟೇಶ

9 thoughts on “ಡಾ ಡೋ.ನಾ.ವೆಂಕಟೇಶ-ಮುಗುಳ್ನಗು

  1. ನಗುವುದು ಸಹಜ ಧರ್ಮ…
    ಅದನರಿತು ಬಾಳುವುದು ನಮ್ಮ ಮರ್ಮ…
    ಉತ್ತಮ ಕವನ, ವೆಂಕಣ್ಣ

  2. ನಿಮ್ಮ ಮುಖದಲ್ಲಿ ಯಾವಾಗಲೂ ಸ್ವಾಗತಿಸುವ ಆ ನಗು ತುಂಬಾ ಸಂತೋಷಕರವಾಗಿರುತ್ತದೆ. ನಿಮ್ಮ ಕವನ ನಿಜಕ್ಕೂ ಸೊಗಸಾಗಿದೆ.

Leave a Reply

Back To Top