ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ಹೃದಯಕಡಲು
ಹೃದಯಕಡಲಲಿ ಭೋರ್ಗರೆಯುತಿದೆ
ನೋವಿನ ಬರ್ಬರ ಅಲೆಗಳು
ದೂರ ಸರಿದರೂ ಅಪ್ಪಳಿಸುತಿದೆ
ಮಾತಿನ ಚಾಟಿಯೇಟುಗಳು
ಸಹನೆಯೆಂಬ ನೌಕೆಯಲಿ
ಬಾಳದೋಣಿಯ ನಡೆಸುತಿರುವೆ
ದಡ ಸೇರುವ ಛಲದಲಿ
ಜೀವನಯಾನ ಮಾಡುತಿರುವೆ
ವಾದ ವಿವಾದಗಳ ಇರಿತಗಳಿಗೆ
ಮೌನವೇ ನಾನಿತ್ತ ಉತ್ತರ
ಬೆನ್ನಟ್ಟಿಹ ಅಡೆತಡೆಗಳಿಗೆ
ಅಂಜದೆ ಬೆಳೆಯುವೆ ಎತ್ತರ
ಪರಿಮಳ ಐವರ್ನಾಡು ಸುಳ್ಯ