ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ತನಗಗಳು
೧
ಅಳಿಲು ಸೇವೆ ಸಾಕು
ಸಂತೃಪ್ತಿ ದೊರಕಲು
ದೊಡ್ಡದು ಸಾಧನೆಗೆ
ಅದುವೇ ಅಡಿಗಲ್ಲು !!
೨
ವಿಧಿಲಿಖಿತವನು
ಮೀರುವರಾರು ಎಂದು
ಸುಮ್ಮನಿರದೆ ಪ್ರಯ
ತ್ನದಿ ಫಲವಿಹುದು !!
೩
ಎಳ್ಳ ಅಮವಾಸ್ಯೆಗೆ
ಎಳ್ಳಕಾಳು ಬಿಸಿಲು
ಹೊಲದಲ್ಲಿ ಬೆಳೆಯು
ರೈತನಿಗೆ ಹುಲುಸು !!
೪
ಇಲಿಗಳ ರಾಜ್ಯದಿ
ಬೆಕ್ಕಿನದು ದರ್ಬಾರು
ಸಣ್ಣವರ ಮೇಲೆಯೇ
ದೊಡ್ಡವ್ರ ಅಧಿಕಾರು !!
೫
ಎಲ್ಲ ದಾನಗಳಲ್ಲಿ
ಶ್ರೇಷ್ಠವು ಸಮಾಧಾನ
ಇಲ್ರಿ ಜೀವನದಲ್ಲಿ
ಒಂದಷ್ಟು ನಿಧಾನ !!
೬
ವೃದ್ಧರದು ಯಾವತ್ತೂ
ಕಿರಿಕಿರಿಯೇ ಸರಿ
ಬಾಲ್ಯದಲ್ಲಿ ನೀನೇನು
ಸುಮ್ಮನಿದ್ದೆಯೇ ಮರಿ !!
೭
ಸತ್ತವರಿಗೆ ಸ್ವರ್ಗ
ನಿಜವಿರಬಹುದು
ಜೀವಂತ ನರಕವೇ
ನಿತ್ಯ ಹಲವರದು !!
೮
ಯುದ್ಧ ಕಾಲದಲ್ಲಿಯೇ
ಶಸ್ತ್ರಾಭ್ಯಾಸ ಸರಿಯೆ ?
ಪರೀಕ್ಷಾ ದಿನದಂದು
ಓದಿ ಪಾಸಾಗಬಹುದೆ ?
೯
ಮಹಿಳೆಯರಿಗಾಗಿ
ಮಹಿಳೆಯ ದುಡಿತ
ಕೆಲವು ಪುರುಷರು
ಕಂಠಪೂರ್ತಿ ಕುಡಿತ !!
೧೦
ಎಳ್ಳು ಬೆಲ್ಲವ ಕೊಟ್ಟು
ತಿಳಿಯಾಗಲಿ ಮನ
ಸಂಕ್ರಾಂತಿ ಶುಭದಿನ
ಹೊಂದಿಕೊಳ್ಳುವ ದಿನ !!
ಪ್ರೊ. ಸಿದ್ದು ಸಾವಳಸಂಗ,ತಾಜಪುರ