ಅಮ್ಮನಿಗೊಂದು ನಮಸ್ಕಾರ

ಲಲಿತಾ ಪ್ರಭು ಅಂಗಡಿ

ಹಾಯ್ಕುಗಳು.

ಅವ್ವಳೆಂದರೆ
ಅಂತರಾಳದ ಅಲೆ
ಅದಮ್ಯ ಸೆಲೆ

ಅವ್ವಳೆಂದರೆ
ಭೂಮಿತೂಕದ ನೆಲೆ
ಸ್ರೃಷ್ಟಿಯ ಅಲೆ

ಅವ್ವಳೆಂದರೆ
ಕರ್ತವ್ಯದ ಚಿಲುಮೆ
ಜೀವದೊಲುಮೆ

ಅವ್ವಳೆಂದರೆ
ಆನಂದದ ಕಣ್ಮಣಿ
ಅಂತರಗಂಗೆ

ಅವ್ವಳೆಂದರೆ
ಪರಂಪರೆಯ ಪಣ್ತಿ
ಪಾವನಮುಕ್ತಿ

ಅವ್ವಳೆಂದರೆ
ಒಡಲಾಳದ ಸೆಲೆ
ಬಾಂದಳದ ಬೆಳ್ಳಿ

ಅವ್ವಳೆಂದರೆ
ಬದುಕಿನ ದೇದಿಪ್ಯ
ಭರವಸೆ ಕೈ

ಅವ್ವಳೆಂದರೆ
ಸಾಂತ್ವನದ ಚಿಲುಮೆ
ಸಹನಾ ಮೂರ್ತಿ

ಅವ್ವಳೆಂದರೆ
ಎಲ್ಲವನು ಸಹಿಸೋ
ಸಾಹಸಗಾಥೆ

ಅವ್ವಳೆಂದರೆ
ದಾರಿದೀಪದ ಬುತ್ತಿ
ಬಾಳಿನ ಶಕ್ತಿ

ಅವ್ವಳೆಂದರೆ
ಸಂಸ್ಕಾರದ ಸಾರಥಿ
ಸಿರಿ ದೇವತೆ


ಲಲಿತಾ ಪ್ರಭು ಅಂಗಡಿ

Leave a Reply

Back To Top