ಅಮ್ಮನಿಗೊಂದು ನಮಸ್ಕಾರ

ಅಮ್ಮನಿಗೊಂದು ನಮಸ್ಕಾರ

ರೇಖಾ ಸುದೇಶ್ ರಾವ್

ತ್ಯಾಗ ಮೂರ್ತಿ

ತ್ಯಾಗಮಯಿ ಮಾತೆಯಿರಲು ಮನೆ ಕೀರ್ತಿ
ಬೆವರ ಸುರಿಸಿ ದುಡಿವಳು ಜೀವನ ಪೂರ್ತಿ
ಕಾಯವೆಲ್ಲ ತುಂಬಿರಲು ಸಹನಾ ಮೂರ್ತಿ
ಹೃದಯ ಸ್ಪರ್ಶಿ ಜೀವ ಹೊತ್ತ ತ್ಯಾಗ ಮೂರ್ತಿ

ಮಮತೆ ವಾತ್ಸಲ್ಯ ತುಂಬಿ ಸಾಕಾರ ಮೂರ್ತಿ
ಒಡಲ ಮಮತೆ ಪ್ರೀತಿ ಹಬ್ಬಿ ಕಾರುಣ್ಯ ಮೂರ್ತಿ
ನೊಂದ ಮನ ಮಿಡಿದರೆ ಕಾರುಣ್ಯ ಮೂರ್ತಿ
ತಾನು ಉಣದೆ ಅಮೃತವಿತ್ತ ವರಾಹ ಮೂರ್ತಿ

ಅರಿಯದೆ ತಪ್ಪೆಸಗಿದರೆ ಕ್ಷಮಯಾ ಧರಿತ್ರಿ
ಸಂಸಾರದ ಜವಾಬ್ದಾರಿ ಹೊರುವಳೆಂಬ ಖಾತ್ರಿ
ಸರ್ವ ಕ್ಷೇತ್ರಗಳಲ್ಲಿ ತಂದು ಕೊಟ್ಟಳು ಕೀರ್ತಿ ಪ್ರೀತಿ
ಚಿತ್ತದೊಳಗಿನ ನೋವು ಹೇಳಲಾರದ ಮನಸ್ಥಿತಿ

ಸರ್ವ ದುಃಖ ನೀಗಿಸಲು ಇರುವ ಮಾತೆ
ಅಮ್ಮನಲ್ಲಿ ಮನಬಿಚ್ಚಿ ಹೇಳಿ ರಹಸ್ಯ ಕತೆ
ನಿಷ್ಠೆಯಿಂದ ಆಲಿಸುವಳು ತನ್ನೆಲ್ಲ ಮಕ್ಕಳ ವ್ಯಥೆ
ಮಾನವೀಯತೆ ಮೆರೆದು ತೋರಿಹಳು ಧನ್ಯತೆ


ರೇಖಾ ಸುದೇಶ್ ರಾವ್

Leave a Reply

Back To Top