ಅನುವಾದ ಸಂಗಾತಿ
ವಿಲಿಯಂ ಶೇಕ್ಸ್ ಪಿಯರ್ (ಸಾನೆಟ್)
ಇಂಗ್ಲೀಷ್ ಮೂಲ. : ವಿಲಿಯಂ ಶೇಕ್ಸ್ ಪಿಯರ್
ಕನ್ನಡಕ್ಕೆ: ಬಾಗೇಪಲ್ಲಿ ಕೃಷ್ಣಮೂರ್ತಿ
ಸುನೀತಾ
ನನ್ನ ಪತ್ನಿ ನಯನ ಸೂರ್ಯನಂತೆ
ಪ್ರಕಾಶಮಾನವೇನಲ್ಲಾ
ಹವಳವಂತೂ ಆಕೆಯ ತುಟಿಗಳಗಿಂತ
ಹೆಚ್ಚು ಕೆಂಪೇ ಆಗಿದೆ
ಮಂಜು ಬಿಳೀ ಎಂದಾದರೆ ಆಕೆಯ
ಸ್ತನಗಳು ಏಕೋ ತುಸು ಮಾಸಲೇ
ಕೇಶವನು ತಂತಿ ಎನ್ನುವುದೇ ಆದರೆ
ಕಪ್ಪುತಂತಿಗಳು ಆಕೆ ಶಿರದಿ ಮೂಡಿದೆ
ನಾ ತಿರುವು ಮರುವು ಕೆಂಪು ಬಿಳಿ ಮಿಶ್ರಿತ
ವಿನ್ಯಾಸ ಕಂಡಿರುವೆ
ಆದರೆ ಅಂತಹ ಮಿಶ್ರಬಣ್ಣವ ಆಕೆಯ
ಕೆನ್ನೆಗಳಲಿ ಎಂದೂ ಕಂಡಿಲ್ಲ
ನನ್ನ ಮಡದಿ ಉಸಿರು ಸೂಸುವ
ಪರಿಮಳಕಿಂತ ಹಲವು
ಸುಗಂಧ ದ್ರವ್ಯ ಪರಿಮಳದಿ ಆನಂದ ದಕ್ಕ
ಬಹುದೇನೋ!
ಆಕೆಯ ನುಡಿಗಾರಿಕೆ ನಾನು ಪ್ರೀತಿಸುವೆ
ಆದರೂ ಸಂಗೀತಕೆ
ಇನ್ನೂ ಹೆಚ್ಚು ಆಹ್ಲಾದಕರ ಧ್ವನಿ ಇದೆ
ಎಂದರಿತೂ ಸಹ
ನಾನು ದೇವತೆಯ ನಡಿಗೆಯನ್ನು
ಕಂಡಿಲ್ಲವೆಂದು ಒಪ್ಪುವೆ
ಆದರೂ ನನ್ನ ಮಡದಿಯ ನಡಿಗೆಯೇ
ವಿಶೇಷ ನಡೆ
ಹಾ ಸ್ವರ್ಗವೇ! ನನ್ನ ತೆರನಾದ ಪ್ರೀತಿ ಬಹಳ
ವಿರಳವೇ ಸರಿ
ಆಕೆಯನು ತಪ್ಪು ಹೋಲಿಕೆಗಳಿಂದ
ಹುಸಿಗೊಳಿಸಲಾಗದು.