ಕಾವ್ಯ ಸಂಗಾತಿ
ಡಾ. ತಯಬಅಲಿ.ಅ. ಹೊಂಬಳ,
ಶುಭ ಸಂಜೆ
ನೀ ಹೂ ಚೆಲ್ಲಿ ಮಲಗಿದಾಗ
ನನ್ನ ನೆನಪಾಗಲಿಲ್ಲವೇ..
ರಕ್ತ ಸುರಿಸಿ ಬೆವರು ಹನಿ ಬಿತ್ತಿ
ಹೊತ್ತು ತಂದ ಮಲ್ಲಿಗೆಯ ಸುಗಂಧದಲ್ಲಿ
ನನ್ನ ಒಲವು ಕಾಣಲಿಲ್ಲವೇ..
ನಾನಾಡಿದ ಮಾತನ್ನು ಧಿಕ್ಕರಿಸಿ ಸಿಡಿದಾಗ
ನೆಲಕ್ಕೆ ಬಿದ್ದು ನವಿಲುಗರಿ
ಕಣ್ಣಸನ್ನೆ ಸೇಳದಿದ್ದು ಕೇಳಲಿಲ್ಲವೇ..
ಅಂಧದಲ್ಲಿ ಛಂದ ಚಂದದ ನನ್ನವಳು
ನನ್ನ ಹೃದಯ ಕದ್ದವಳೆಂದು ನಾನೊದಿದ
ಕವನ ನೆನಪಾಗಲಿಲ್ಲವೇ
ತಿಳಿಗೊಂಪು ಗುಲಾಬಿ ಹೊತ್ತು
ತಂದ ಹೂವುಗಳು ನೀ ನೆಲಕೊರಸಿದ್ದು ನೆನಪಾಗಲಿಲ್ಲವೇ
ನಾನೊಂದು ನಿಮಿಷ ಭೇಟಿಯ ಮಿಲನಕ್ಕೆ
ತಡವಾದೊಡೆ ನೆತ್ತಿಯ ಸುತ್ತಿಗೆ
ಬಡಿದಿದ್ದು ನಸುನಕ್ಕಿದ್ದು ನೆನಪಿಲ್ಲವೇ
ನೆನಪಿಲ್ಲ ನೆನಪಿಲ್ಲವೆಂದು ಒಲವು
ತುಂಬಿದ ನನ್ನ ಹೃದಯ
ಸ್ತಬ್ದವಾದಾಗಲೆ ನೆನಪಾಗುವದಾದರೆ
ನಾನು ಸ್ತಬ್ದನಾಗಲು ಸಿದ್ದ
ಬರುವೆಯಾ.. ಸ್ತಬ್ದಗೊಂಡ
ಹೃದಯ ಕೊನೆಯ ಬಡಿತ ಕೇಳಲು.
ಡಾ. ತಯಬಅಲಿ.ಅ. ಹೊಂಬಳ
ಕೊನೆ ಮಿಡಿತ ಚಂದ ಸರ್