ಕಾವ್ಯ ಸಂಗಾತಿ
ಚಂದಕಚರ್ಲ ರಮೇಶ ಬಾಬು
ಕಿಟಕಿ ತೆರೆಯೋಣ
ಮನಕ್ಕೆ ಮುಸುಕಿದ ಒಬ್ಬಂಟಿತನದ
ಹೊಗೆಯನ್ನು ಹೊರಹಾಕಿ
ಹೊರಗಡೆಯ ದೃಶ್ಯ ಸಸ್ಯ ಹಕ್ಕಿ ಇನಿದನಿ
ತಾರೆ ಚಂದಿರರನ್ನು ಮನದೊಳಕ್ಕಿಳಿಸೋಣ
ತೆರೆದಿಟ್ಟಾಗ ಬಂದಪ್ಪುವ
ಹೊಸ ಹೊಸ ಭಾವನೆಗಳಿಗೆ
ಕವಿತೆಯ ಕಟ್ಟಿ ಮತ್ತೆ
ಹೊರ ಜಗತ್ತಿಗೆ ತೂರಿ ಬಿಡೋಣ
ಮನವನ್ನು ಹೊರಕ್ಕೊಪ್ಪಿಸಿಕೊಳ್ಳೋಣ
ಬಚ್ಚಿಟ್ಟು ಕಿಟಕಿಯ ಮುಚ್ಚಿಟ್ಟು
ಕೊರಗೋದುಬೇಡ ಕೊಳೆಯೋದು ಬೇಡ
ಆನೋ ಭದ್ರಾ: ಕೃತವೋ ಯಂತು ವಿಶ್ವತಃ ಮರೆಯೋದುಬೇಡ
ಮನೆಯ ಕಿಟಕಿ ತೆರೆಯೋಣ
ಬೆಳಕ ಗಾಳಿಯ ಕರೆಯೋಣ
ಮನದ ಕಿಟಕಿಯ ತೆರೆಯೋಣ
ಸನ್ನಿಹಿತರಿಗೆ ಹತ್ತಿರವಾಗೋಣ
ಪುಸ್ತಕದ ಕಿಟಕಿ ತೆರೆಯೋಣ
ವಿಶ್ವವನ್ನೇ ಅಂಗಳಕ್ಕೆ ತರೋಣ
ಮಸ್ತಕದ ಕಿಟಕಿ ತೆರೆಯೋಣ
ಎಲ್ಲ ಕಡೆಯಿಂದ ಜ್ಞಾನ ಪಡೆಯೋಣ
ಲ್ಯಾಪ್ ಟಾಪಿನ ಕಿಟಿಕಿ ತೆರೆಯೋಣ
ಪುಸ್ತಕಕ್ಕೆ ಪರ್ಯಾಯವೆನ್ನೋಣ
ವಾಟ್ಸಪ್ಪಿನ ಕಿಟಿಕಿ ತೆರೆಯೋಣ
ದೂರವಿದ್ದರೂ ಹತ್ತಿರವಾಗೋಣ
————————-
ಚಂದಕಚರ್ಲ ರಮೇಶ ಬಾಬು.
ಸುಂದರ ಕವಿತೆ ರಮೇಶ್ ಸರ್
ಚಂದದ ಕವಿತೆ.ಪ್ರಾಸಗಳು ಪ್ರಾಸಗಳಾಗದೆ ಕವಿತೆಯೊಂದು ಭಾವವಾಗಿರುವುದು ವಿಶೇಷತೆ