ಕಾವ್ಯ ಸಂಗಾತಿ
ಶಾಂತ ಜಯಾನಂದ್
ಅಭಿಜ್ಞಾನ
ಮುದ್ರೆಯುಂಗುರಕ್ಕಷ್ಟೇ ಸೀಮಿತ,
ಪ್ರೀತಿಯ ಪರಾಕಾಷ್ಟೆ,
ಕಣ್ವರಲ್ಲಿ ಬೆಳೆದರೇನೋ,
ಕಾಮ, ಮೋಹವ
ಗೆಲ್ಲಲಾಗಲಿಲ್ಲ,
ಅಭಿಜ್ಞಾನ ವಿಲ್ಲದೆ ನೆನಪಾಗ
ದೊಲ್ಲದು, ಗಂಧರ್ವ ವಿವಾಹ
ಪ್ರೀತಿ, ಪ್ರೇಮ
ಕಿರೀಟದ ಭಾರದಲಿ,
ಶಾಪ, ದೂರ್ವಾಸನದು,
ಮನೆ, ಮಾಡು, ಮೋಹಗಳಿಂದಾದ
ಹೊರತಾದವನು,
ಮೋಹದ ಮಳೆಯಲ್ಲಿ
ಮಿಂದೆದ್ದ ವಳಿಗೆ
ಹಬ್ಬಿದ ಮಂಕು
ಏನೂ ಕಾಣದಾಯ್ತು,
ನದಿಯಲ್ಲೇ ಕೈ ಜಾರಿಸಿ
ಕೊಂಡ, ಮುದ್ರೆಯುಂಗುರ,
ಒಡಲಲ್ಲಿ ಮಗುವಿರಿಸಿ
ಕೊಂಡವಳ
ನೋವು, ನಲಿವು ಅವಳಿಗಷ್ಟೆ,
ತಪ್ಪು,
ವಿಶ್ವಾ ಮಿತ್ರನದೂ ಅಲ್ಲ
ಮೇನಕೆಯದೂ ಅಲ್ಲ,
ರಾಜನದೂ ಅಲ್ಲ
ಋಷಿಯದೂ ಅಲ್ಲ,
ಭ್ರಮೆಗೆ ಒಳಗಾಗಿ
ಮೈ ಮನಸೊಪ್ಪಿಸಿ
ಕೊಂಡವಳು ಇವಳು.
ಶಾಂತ ಜಯಾನಂದ್
Congratulations…very well said
Beautiful..very well said
ಸುಂದರ ಕವಿತೆ
ಶಕುಂತಲ ಳ ಚಿತ್ರಣ ಬಲು ಸೊಗಸಾಗಿದೆ ಕಾವ್ಯ ವನ್ನು ಚಿಕ್ಕ ಚೊಕ್ಕವಾಗಿ ಹೇಳಿರುವುದು ಮುದ ನೀಡುತ್ತದೆ
ಬರಹ ಅಮೋಘ……ತಪ್ಪು ಯಾರದೆಂಬ ಜಿಜ್ಞಾಸೆಯಲ್ಲಿ ನಾನಿದ್ದೇನೆ ಈಗ….