ಕಾವ್ಯ ಸಂಗಾತಿ
ಪ್ರೊ ರಾಜನಂದಾ ಘಾರ್ಗಿ
ಸೋಲು ಗೆಲವಿನ ಮೆಟ್ಟಿಲು

ಬಿದ್ದರೂ ಎದ್ದು ಓಡುವ
ಛಲವಿರಬೇಕು ಮನದಲ್ಲಿ
ಎದುರು ಬಂದ ತೊಡರುಗಳ
ಮೆಟ್ಟಿ ನಿಲ್ಲುವ ಬಲವಿರಬೇಕು
ಜೀವನದ ಸಂಕೀರ್ಣತೆಯಲ್ಲಿ
ಯಶದ ಗುಟ್ಟು ಅಡಗಿಹುದು
ಗುರಿ ಇಡುವ ಅರ್ಜುನನ ದೃಷ್ಟಿ ಬೇಕು
ಚಕ್ರವ್ಯೂಹ ಭೇದಿಸಿ ಯಶ ಪಡೆಯುವ
ಅಭಿಮನ್ಯುವಿನ ಛಲ ಬೇಕು
ಹೆಜ್ಜೆ ಹೆಜ್ಜೆಗೆ ಸವಾಲುಗಳನೆಸೆಯುವ
ಜೀವನದ ಚದುರಂಗದಾಟದಲಿ
ಸಮಯೋಚಿತ ಹೆಜ್ಜೆ ಹಾಕುವ
ದೂರ ದೃಷ್ಟಿ ಬೆಳೆಸ ಬೇಕು
ಕತ್ತಲೆಯ ನಂತರ ಬೆಳಕು
ನಿತ್ಯ ಸತ್ಯ ಪ್ರಕೃತಿಯ ನಿಯಮ
ಕಾಯುವ ಸಹನೆ ಇರಬೇಕು
ಸೋಲು ಗೆಲುವಿನ ಮೆಟ್ಟಿಲು
ಎಂಬ ಮಂತ್ರವನು ನೆನಪಿಡಬೇಕು
ನಿನ್ನ ಎದುರಿನ ಗುರಿ ಮುಟ್ಟಲು
ಗೆಲುವಿನ ಕೀರಿಟ ಧರಿಸಲು
ಪ್ರೊ ರಾಜನಂದಾ ಘಾರ್ಗಿ
