ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಕೊಟಗಿ
ಗಜಲ್
ನಿನ್ನ ಹೆಜ್ಜೆಯ ಗೆಜ್ಜೆನಾದದ ಇಂಪು ಒಂದು ಗಜಲ್ ಕಣೆ
ಕಿಂಕಿಣಿನಾದಗೈವ ಕೈಬಳೆ ಗುಂಪು ಒಂದು ಗಜಲ್ ಕಣೆ
ಮೈಗಂಧದ ಘಮಲಿನ ಅಮಲು ಸಣ್ಣಗೆ ಸುಳಿದಾಡುತಿದೆ
ತನುಮನವ ಮತ್ತೇರಿಸುವ ಆ ಕಂಪು ಒಂದು ಗಜಲ್ ಕಣೆ
ಶುದ್ಧ ಶರಾಬಿನ ಗುಟುಕಲೂ ಕಾಡಿದೆ ವಿರಹವೇದನೆ
ಮದನ ಮೋಹಿಸುವ ಮಾದಕತೆ ಯ ಜೊಂಪು ಒಂದು ಗಜಲ್ ಕಣೆ
ಶಿಲ್ಪಿ ಕಟೆದ ದೇಹಮಾಟವನು ಸೊಂಕಿಸಿದ ಅನುಭೂತಿ
ಕಾವ್ಯಾನುರಾಗದ ಐಸಿರಿಯ ಸೊಂಪು ಒಂದು ಗಜಲ್ ಕಣೆ
ಕತ್ತಲೆಯ ಮುಸುಕು ಸರಿಸಿ ಬೆಳಗಿಸಿದೆ ನಂದಾದೀವಿಗೆ
ದಣಿದ ಜೀವಕೆ ವಿಜಿಯ ಮಡಿಲಿನ ತಂಪು ಒಂದು ಗಜಲ್ ಕಣೆ.
ವಿಜಯಲಕ್ಷ್ಮಿ ಕೊಟಗಿ
ಕವಿ ಪರಿಚಯ:
ವಿಜಯಲಕ್ಷ್ಮಿ ಕೊಟಗಿ
ಶಿಕ್ಷಕಿ ಸ.ಹಿ.ಪ್ರಾ.ಶಾ.ಹೊಸಕನಕಾಪುರ
ತಾ.ಜಿ.ಕೊಪ್ಪಳ
6 ಕೃತಿಗಳು ಲೋಕಾರ್ಪಣೆಗೊಂಡಿವೆ