ಮಮತೆಯ ತಾಯಿ ಕವಿತೆ-ನಿಲೀಷಾ ಪ್ರೀಮಾ ಮಾರ್ಟಿಸ್

ಕಾವ್ಯ ಸಂಗಾತಿ

ನಿಲೀಷಾ ಪ್ರೀಮಾ ಮಾರ್ಟಿಸ್

ಮಮತೆಯ ತಾಯಿ

ಕಮಲದ ನಿನ್ನ ಮೊಗವ
ನೋಡಿ ನಿಂತೆ ಓ ಚೆಲುವೆ
ಚಂದಿರನ ಅಂದಕ್ಕೆ ನಾಚುವಂತೆ ಶೃಂಗರಿಸುವೆ
ನಿನ್ನ ಅಂದದ ಚೆಲುವಿಗೆ ನಾ ಕಳೆದುಹೋದೆ

ಕಣ್ಣ ರೆಪ್ಪೆ ಮಿಟುಕಿಸದೆ ನಿನ್ನ ನೋಡಿದೆ
ನಿನ್ನ ನಗುವಿನ ಅಂದಕ್ಕೆ ನಾ ಸೋತುಹೋದೆ
ಮನದಿ ನಿನ್ನ ನಾ ಸ್ವೀಕರಿಸಿದೆ
ಮಮತೆಯ ಪ್ರೀತಿಗೆ ನೀ ಕಾರಣವಾದೆ

ಪ್ರೀತಿಯ ದೇವತೆ ನೀನು
ನನ್ನ ಜೀವನದ ಗೆಳತಿ ನೀನು
ಮನದ ಶಾಂತಿಯ ಒಡತಿ ನೀನು
ನನ್ನ ಮಮತೆಯ ತಾಯಿ ನೀನು
—————————–

ನಿಲೀಷಾ ಪ್ರೀಮಾ ಮಾರ್ಟಿಸ್

Leave a Reply

Back To Top