ಪರಿಮಳ ಐವರ್ನಾಡು ಸುಳ್ಯ-ಪಯಸ್ವಿನಿಯ ತೀರದಲಿ

ಕಾವ್ಯ ಸಂಗಾತಿ

ಪಯಸ್ವಿನಿಯ ತೀರದಲಿ

ಪರಿಮಳ ಐವರ್ನಾಡು ಸುಳ್ಯ

ಪಯಸ್ವಿನಿಯ ತೀರದಲಿ
ಹೊಂಗೆಯ ನೆರಳಲಿ
ತಂಗಾಳಿಯ ತಂಪಿನಲಿ
ನಿನಗಾಗಿ ಕಾಯುತಲಿ
ಚಡಪಡಿಸುತ ಮನದಲಿ

ಎಂದು ಬರುವಿಯೋ ಕಾಣೆ
ನನ್ನುಸಿರು ನೀನು ತಾನೇ
ಎನ್ನ ಬಾಳಿನಾಸರೆ ನೀನೇ
ದಿನವೂ ನೆನೆವೆನು ನಿನ್ನನೇ

ಕನಸೊಂದ ಕಟ್ಟಿರುವೆನು
ನಿನ್ನಿಂದಲೇ ಉಸಿರಾಡುವೆನು
ನಿನ್ನುಸಿರ ತುಂಬುವೆನು
ಸೇರುವೆಯಾ ನನ್ನನು

ಸ್ವಪ್ನದಲೂ ಕಾಡುತಿರುವೆ
ನಿನ್ನ ತೋಳಲಿ ನಾನಿರುವೆ
ಚುಂಬನ ಮಳೆಗೆರೆಯುವೆ
ನಿನ್ನ ರೂಪ ನಾ ತಾಳುವೆ

ಸಮಯವು ಮೀರಿಹುದು
ಕತ್ತಲೆಯು ಕವಿದಿಹುದು
ಹೃದಯವು ಕರೆದಿಹುದು
ನಯನವು ನಾಚಿಹುದು

ಎಲ್ಲೆ ಮೀರಿದೆ ಮನ
ನನ್ನ ನಿನ್ನ ಬಂಧನ
ಅನುರಾಗದ ಸ್ಪಂಧನ
ನಿತ್ಯ ನೂತನ ನಮ್ಮೀ ಜೀವನ


ಪರಿಮಳ ಐವರ್ನಾಡು ಸುಳ್ಯ












Leave a Reply

Back To Top