ಪ್ರೊ ರಾಜನಂದಾ ಘಾರ್ಗಿ-ಛೊಟಿ ಬೆಹರ್ ಗಜಲ್

ಕಾವ್ಯ ಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ಛೊಟಿ ಬೆಹರ್ ಗಜಲ್

ಬದುಕಿಗಾಗಿ ರೆಕ್ಕೆ ಬಡಿದು ದಣಿದೆನು ನಾನು
ಸುಡುವ ಉದರಾಗ್ನಿ ಎದುರು ಮಣಿದೆನು ನಾನು

ಮಲಗಿದ ಚಾಪೆಯ ಮೀರಿ ಬೆಳೆಯುತ್ತಿವೆ ಕಾಲು
ಚಾಚಿದ ಕಾಲುಗಳ ಕತ್ತರಿಸಲು ಕಲಿತೆನು ನಾನು

ಹಾರುತ್ತಾ ಗಗನದೆತ್ತರಕೆ ಎರುವ ಆಸೆ ನನಗೆ
ಹಾರಿದಷ್ಟು ಬೆಳೆಯುವ ಆಕಾಶವ ಅರಿತೆ ನಾನು

ಕಾಮನಬಿಲ್ಲು ತೋರುವ ಬಣ್ಣಗಳು ಬಲು ಆಕರ್ಷಕ
ಕಪ್ಪಿನಲ್ಲಿ ಸುತ್ತಿಕೊಂಡು ದಿನ ಕಳೆದೆನು ನಾನು

ಭಾರವಾಗುತ್ತಲಿದೆ ರಾಜಿಯ ಬದುಕಿನ ಬಂಡಿ
ಭರವಸೆಯ ಕುದುರೆಯ ಹಚ್ಚಿ ಎಳೆದೆನು ನಾನು


ಪ್ರೊ ರಾಜನಂದಾ ಘಾರ್ಗಿ

ಪ್ರೊ ರಾಜನಂದಾ ಘಾರ್ಗಿಊರು : ಬೆಳಗಾವಿ ವೃತ್ತಿ: ಪ್ರಾಧ್ಯಾಪಕಿ
ಪ್ರಕಟಣೆಗಳು:
ಅಂತರಂಗದ ಅಲೆ – ಕವನ ಸಂಕಲನ
ಅವಾಂತರ- ಕಥಾಸಂಕಲನ
ಷರ್ಲಾಕ್‌ ಹೋಮ್ಸ್‌ ಕಥೆಗಳು ೧-೨ – ಭಾಷಾಂತರ ಕೃತಿ
ಅವಿಸ್ಮರಣೀಯ ಭೂತಾನ- ಪ್ರವಾಸ ಕಥನ

Leave a Reply

Back To Top