ಎನ್.ಶೈಲಜಾ ಹಾಸನ ಕವಿತೆ-ಗೆದ್ದೆ ಬಿಡು ನೀನು

ಕಾವ್ಯ ಸಂಗಾತಿ

ಎನ್.ಶೈಲಜಾ ಹಾಸನ

ಗೆದ್ದೆ ಬಿಡು ನೀನು

ನೀನೊಮ್ಮೆ ನನ್ನಂತಾಗು
ನನ್ನೊಡಲ ಬೇಗೆಯ
ಉರಿ ತಗುಲಿ ನಿನ್ನೆದೆ
ಬೆಂದಾಗಲಾದರೂ

ನೋವಿನುರಿ ತಣಿಸುವ
ತಂಪಾಗುವೆಯೇನೋ
ನೀನು

ಎಷ್ಟೋಂದು ಭಾವಗಳ
ಆಸೆಗಳ ಪ್ರವಾಹಕೆ
ಅಣೆಕಟ್ಟಿನ ನಿಯಂತ್ರಣ

ಬಸಿರಾದ ಕನಸುಗಳ
ಗರ್ಭಪಾತ
ಬಂಜೆಯೊಡಲಿಗಾ
ಖಾಲಿ ಖಾಲಿ

ಎದೆಯ ಶೂನ್ಯತೆ
ಅರಿವಾಯಿತೇನು

ನೀನಿದ್ದಿಯಾ ಅನ್ನೊ
ಭ್ರಮೆಯ ಪೊರೆ
ಕಳಚುವ ಗಳಿಗೆಗೆ
ಬರೆದು ಬಿಡು
ಮುನ್ನುಡಿ

ನಿನ್ನ ಬಿಂಬವ
ಅಳಿಸುವ
ಯತ್ನದಲ್ಲಿ ಗೆದ್ದೆ
ಬಿಡು ನೀನು


ಎನ್.ಶೈಲಜಾ ಹಾಸನ


 

One thought on “ಎನ್.ಶೈಲಜಾ ಹಾಸನ ಕವಿತೆ-ಗೆದ್ದೆ ಬಿಡು ನೀನು

Leave a Reply

Back To Top