ಸೋಲು ಗೆಲುವಿನ ಮೆಟ್ಟಿಲು,ಡಾ ದಾನಮ್ಮ. ಚ. ಝಳಕಿ ಯವರ ಹೊಸ ಕವಿತೆ

ಕಾವ್ಯ ಸಂಗಾತಿ

ಡಾ ದಾನಮ್ಮ. ಚ. ಝಳಕಿ.

ಸೋಲು ಗೆಲುವಿನ ಮೆಟ್ಟಿಲು

ಮುಳ್ಳು‌ಕಲ್ಲಿನ ಹಾದಿಯಲಿ
ಕಷ್ಟಗಳ ಸುರಿಮಾಲೆಯಲಿ
ಎದೆಗುಂದದೆ ಸಾಗಲಿ
ಸೋಲು ಮೆಟ್ಟಿಲಾಗಿಸಲಿ

ಜೀವನದ‌ ಹಾದಿಯಲಿ
ಸೋಲು ಕಾಣದವರಿಲ್ಲ
ಬೇಧಿಸುತ ಸಾಗುವೆ
ಸತ್ಯ ಸಮತೆಯೆಡಗೆ

ಬುದ್ಧಬಸವರ‌ ನೀತಿ
ಕಟ್ಟಕಡೆಯತನಕ
ಗಟ್ಟಿಯಾಗಿಸಿಕೊಂಡು
ಕಣ ಕಣದಲಿ ನೆನೆಯುತ

ಅಜ್ಞಾನ ಅಳಿಸುತ
ಸುಜ್ಞಾನ ಬೀರುತ
ಸೋತು ಗೆಲ್ಲುತಲಿ
ಕಹಿಯನ್ನು ನುಂಗುತಲಿ

ಮರಳಿ ಯತ್ನವ ಮಾಡಿ
ಸ್ಪೂರ್ತಿಯ ಪಾಠದಲಿ
ಎಲ್ಲವನು ಎದುರಿಸಿ
ಸೋಲು ಗೆಲುವಿನ ಮೆಟ್ಟಿಲಾಗಲಿ
ಬದುಕು ಬೇರೆಯವರಿಗೆ ಪಾಠವಾಗಲಿ


ಡಾ ದಾನಮ್ಮ. ಚ. ಝಳಕಿ.

ಡಾ ದಾನಮ್ಮ. ಚ. ಝಳಕಿಯವರು ಶ್ರೀಮತಿ ಸೋಮವ್ವ ಚ ಅಂಗಡಿ ಕರ್ನಾಟಕ ಪಬ್ಲಿಕ ಶಾಲೆ, ಕೆ.ಕೆ.ಕೊಪ್ಪ, ತಾ: ಬೆಳಗಾವಿ ಗ್ರಾಮೀಣ ಶ್ರೀಮತಿ ಸೋಮವ್ವ ಚ ಅಂಗಡಿ ಕರ್ನಾಟಕ ಪಬ್ಲಿಕ ಶಾಲೆ, ಕೆ.ಕೆ.ಕೊಪ್ಪ, ತಾ: ಬೆಳಗಾವಿ ಗ್ರಾಮೀಣ
ಜಿಲ್ಲೆ: ಬೆಳಗಾವಿಯಲ್ಲಿ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಲೇ ಸಾಹಿತ್ಯ ಕೃಷಿ ನಡೆಸುತ್ತ ಬಂದಿದ್ದಾರೆ

Leave a Reply

Back To Top