ಡಾ. ವೀಣಾ ಎನ್ ಸುಳ್ಯ-ನಡೆಯಿರಲಿ ಗುರಿಯೆಡೆಗೆ

ಕಾವ್ಯ ಸಂಗಾತಿ

ಡಾ. ವೀಣಾ ಎನ್ ಸುಳ್ಯ

ನಡೆಯಿರಲಿ ಗುರಿಯೆಡೆಗೆ

ನೆನಪುಗಳ ಮೆರವಣಿಗೆ ಸಾಗುತಿದೆ ಸತತವೂ
ಧರೆಯಿಂದ ನಭದೆಡೆಗೆ ಚಣ ಕಾಲನಿಲದೆ
ಎಳೆತನದ ಸೊಗಸುಗಳು ಕೆಳೆ ತನದ ಸವಿನೋಟ
ತರುತಲಿದೆ ಹುಮ್ಮಸ್ಸುಬಿಡದೆ

ದಿನದಿನದ ನೋವುಗಳು ಎಡೆಬಿಡದ ದುಗುಡಗಳು
ಸುಳಿಯುತಿದೆ ಕಾರ್ಮೋಡದಂತೆ
ಗುಡುಗುಮಿಂಚಿನ ಸಹಿತ ಮಳೆಯಾಗಿ ತಿಳಿಯಾದ
ಗಗನವಾಯಿತು ಇಳೆಗೆ ಸ್ಪೂರ್ತಿ

ಮೆಚ್ಚಿಸಲು ಯಾರನ್ನೋ ತರ್ಕಿಸಲು ಯಾರಲ್ಲೂ
ಮಾಡದಿರು ಏನನ್ನೂ ಜಗದಿ
ಹೊಗಳಿಕೆಗೆ ತೆಗಳಿಕೆಗೆ ಮನಕೊಡದೆ ಬಾಳಲ್ಲಿ
ನಡೆಯಿರಲಿ ಗುರಿಯೆಡೆಗೆ ನಿರತ



ಡಾ. ವೀಣಾ ಎನ್ ಸುಳ್ಯ

Leave a Reply

Back To Top