ಕಾವ್ಯ ಸಂಗಾತಿ
ಸಿದ್ದಲಿಂಗಪ್ಪ ಬೀಳಗಿ
ತನಗಗಳು
೧
ಮತಹಾಕುವ ಮುನ್ನ
ನೂರು ಸಾರೆ ಯೋಚಿಸು
ಆತ್ಮಸಾಕ್ಷಿಯಂತೆಯೇ
ಅದನು ಚಲಾಯಿಸು
೨
ಅಂಜು ಅಳುಕಿಲ್ಲದೇ
ಮತ ಕೇಂದ್ರಕೆ ಹೋಗು
ಹಂಗಿನಲಿ ಬೀಳದೇ
ಮತವ ಹಾಕಿ ಬೀಗು
೩
ಸೂಕ್ತ ವ್ಯಕ್ತಿ ಆಯ್ಕೆಗೆ
ಪ್ರತಿ ಮತ ಅಮೂಲ್ಯ
ಉದಾಸೀನ ಮಾಡಿ ನೀ
ಕಳೆಯಬೇಡ ಮೌಲ್ಯ
೪
ಹಣ ಹೆಂಡದಾಸೆಗೆ
ಮಾರದಿರು ಮತವ
ಬಲಪಡಿಸು ನೀನು
ಸಂವಿಧಾನದಾಶಯ
೫
ಯೋಗ್ಯ ನಾಯಕನಾಯ್ಕೆ
ಮತದಾರನ ಕೈಲಿ
ಅಯೋಗ್ಯರ ಕಳಿಸಿ
ಮನೆಗೆ ಬರಿಗೈಲಿ
೬
ಮತದಾನದ ಬಗ್ಗೆ
ಬೇಡವದು ಬೇಸರ
ನಿನ್ನೊಂದು ಮತದಲ್ಲೆ
ಭವಿಷ್ಯವು ನಿರ್ಧಾರ
೭
ಮಾತಿಗೆ ಮರುಳಾಗಿ
ಹಾಕಬೇಡಿ ಮತವ
ಪ್ರತಿನಿಧಿ ಆಯ್ಕೆಗೆ
ನೀನೇ ಯೋಚಿಸು ಸ್ವತಃ
೮
ಪ್ರಜೆಗಳೇ ಪ್ರಭುವು
ಎಲ್ಲೆಡೆ ಮೊಳಗಲಿ
ಪ್ರಜಾಪ್ರಭುತ್ವದೆಡೆ
ನಮ್ಮ ನಡೆ ಸಾಗಲಿ