ಮನ್ಸೂರ್ ಮುಲ್ಕಿ ಕವಿತೆ-ಪಪ್ಪ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಪಪ್ಪ

ಪಪ್ಪ ನಿನ್ನ ಬೆವರಲ್ಲಿ ನಾನು
ಬೆಳಕನ್ನು ಕಂಡಿಹೆನು
ನಿನ್ನ ದುಡಿಮೆಯಲ್ಲಿ ನಾನು
ಖುಷಿಯನ್ನೇ ಪಡೆದಿಹೆನು.
ಪಪ್ಪ ಖುಷಿಯನ್ನೇ ಪಡೆದಿಹೆನು./2/

ಪಪ್ಪ ನೀನು ಹೊರಡುವ ವೇಳೆ
ಮರಳಿ ಮನೆಗೆ ಬರುವ ವೇಳೆ
ನೀ ಬರೆಯುವ ನಗುವಿನ ಹಾಳೆ
ಪಪ್ಪ ಅಳಿಸಲಾಗದ ಮನಸ್ಸಿನ ಹಾಳೆ

ಪಪ್ಪ ನೀ ಉಂಡ ನೋವು
ನನಗೆಂದೂ ಕಾಣಲೇ ಇಲ್ಲ
ನಾ ಪಡೆದ ಖುಷಿಯನ್ನು
ಪಪ್ಪ ನೀನೆಂದೂ ಪಡೆಯಲೇ ಇಲ್ಲ

ಪಪ್ಪ ನೀನಾಡಿಸಿದ ಜೋಕಾಲಿ
ಮತ್ತೇ ಆಡಿಸೆಂದ ನನ್ನ ಖಯಾಲಿ
ನಾನರಿಯದಾದ ನಿನ್ನ ಕುಂದಿದ ಶಕ್ತಿಲಿ
ಪ್ಪಪ್ಪ ನನ್ನ ಕ್ಷಮಿಸಿಬಿಡಪ್ಪ
ಪಪ್ಪ………………………


ಮನ್ಸೂರ್ ಮುಲ್ಕಿ

Leave a Reply

Back To Top