ಡಾ. ತಯಬಅಲಿ.ಅ. ಹೊಂಬಳ ಕವಿತೆ-ನಿರ್ಗತಿಕ ರಾಜನ ಗಜಲ್

ಕಾವ್ಯ ಸಂಗಾತಿ

ಡಾ. ತಯಬಅಲಿ.ಅ. ಹೊಂಬಳ

ನಿರ್ಗತಿಕ ರಾಜನ ಗಜಲ್

ದಾರಿಯಲ್ಲಿ ಮಗು ನಡೆಯುತ್ತಿರುವಾಗಲೇ
ಕಣ್ಣೀರು ಕಣ್ಣಲ್ಲಿ ಇಲ್ಲ ಆದರೂ ಕಣ್ಣೀರು ಹೃದಯದಲ್ಲಿ
ಆ ಹೃದಯ ಹೇಳುತ್ತೆ..

ನನಗೂ ಒಬ್ಬಳು ಅಮ್ಮ ಇದ್ದಿದ್ದರೆ..
ಅವಳ ಮಡಿಲಲ್ಲಿ ಆಡುತ್ತಿದ್ದೆ
ಪ್ರೀತಿಸುತ್ತಿದ್ದೆ ಕೈ ತುತ್ತು ತಿನ್ನುತ್ತಿದ್ದೆ

ಆದರೆ.. ನನಗೆಲ್ಲಿ ಅಮ್ಮ
ನನಗ್ಯಾವ ಕನಸು ನನಗ್ಯಾ ಮಡಿಲು
ನನಗ್ಯಾವ ತುತ್ತು
ನಾನೊಬ್ಬ ಅನಾಥ ನಿರ್ಗತಿಕ ಹುಡುಗ..

ನಾನೇನು ತಪ್ಪು ಮಾಡಿದೆ
ನನಗ್ಯಾವ ಶಿಕ್ಷೆ ಮಾಡದೆ
ಇರುವ ತಪ್ಪು ವಪ್ಪಿಗೆ ಕಪ್ಪು
ಕೊಟ್ಟವರಾರು ಕಪ್ಪು ಪಡೆದವರಾರು

ಹಸಿವು ಕಣ್ಣೀರು ರಕ್ತ ಸುರಿಸುತ್ತೆ
ಒರೆಸಲು ಬರುವಿರಾ..
ಮಾಯದ ಗಾಯಕ್ಕೆ ಮುಲಾಮು ಹಚ್ಚುವಿರಾ

ಕರಿದಾದ ಕತ್ತಲಲ್ಲಿ ಭಯದ ನೆರಳಲ್ಲಿ
ಧೈರ್ಯದ ಬುತ್ತಿ ಬಿಚ್ಚವಿರಾ
ನನಗಾಗಿ ಬರುವವರು ಯಾರು..

ನಾನು ಮನುಷನಲ್ಲವೇ
ಬಾಲಕನಲ್ಲವೇ
ಕನಸು ಕಾಣಲು ಆಕಾಶದ ತಾರೆಗಳನ್ನು
ಎಣಿಸುವವನಲ್ಲವೇ

ಆದರೂ ನಾನೋಬ್ಬ ಅನಾಥ
ಕನಸು ಕಾಣುವ ಸರದಾರ
ರಾಜಾಧಿರಾಜ ನಿರ್ಗತಿಕ ರಾಜ.

**

ಡಾ. ತಯಬಅಲಿ.ಅ. ಹೊಂಬಳ, ಗದಗ

Leave a Reply

Back To Top