ಕಾವ್ಯ ಸಂಗಾತಿ
ಆಶಾ ಯಮಕನಮರಡಿ
ಬುದ್ಧ ಪೌರ್ಣಿಮೆ
ಬದುಕಿನ ಸತ್ಯವ ತಿಳಿದು
ನಡೆದನವ ದೂರ ದಾರಿಯಲಿ
ಅರಿವಿನಾ ಮಾರ್ಗವನರಸಿ
ತೊರೆದನೆಲ್ಲಾ ಬಂಧಗಳ
ಶುದ್ಧ ಬದುಕಿನ ಪಥದಿ
ಶೃಧ್ಧೆಯ ಬದ್ಧತೆಯಲ್ಲಿ
ನಿಜ ಜ್ಞಾನ ಶೋಧನೆಯು
ಫಲಿಸಿದಾ ದಿವ್ಯ ಸಮಯವದು
ಮೈಮನವ ಸುತ್ತಿದಾ
ಭವ ತಾಪಗಳನೆಲ್ಲಾ
ಅಳಿಸಿ
ನಿಜ ಶಾಂತಿ ನೆಲೆಯನ್ನು
ಜಗಕೆ ತೋರಿದ ದಿನವದು
ಹುಣ್ಣಿಮೆಯ ಹೊಸ ಬೆಳಕು
ಹಸನ ಗೊಳಿಸಿತು ಬದುಕು
ಮಹಾವೃಕ್ಷದ ಜ್ಞಾನದಾ ನೆರಳು
ಜಗಕೆ ಅರುಹಿತು ಸತ್ಯದಾ ತಿರುಳು
ಆಶಾ ಯಮಕನಮರಡಿ
ಅರ್ಥಪೂರ್ಣ ಸಾಲುಗಳು