ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ”

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

“ಬುದ್ಧ ಮಧ್ಯರಾತ್ರಿ ಎದ್ದ”

ಅಂದು
ಸಿದ್ಧಾರ್ಥನೊಳಗಿದ್ದ ಬುದ್ಧ
ಮಧ್ಯರಾತ್ರಿ
ಯಾರಿಗೂ ಕಾಣದೇ ಎದ್ದ !!

ಮುಪ್ಪ,ರೋಗ,ಸಾವು
ಮೊದಲ ಸಲ ನೋಡಿದ
ಇವುಗಳ ಅನ್ವೇಷಣೆಯೇ
ಜೀವನದ ಪರಮ ಗುರಿ ಎಂದ !!

ಸರಿಯಿತು ಸಂಸಾರ
ಹಿಂದೆ ಹಿದೆ
ಮೋಕ್ಷ,ಜ್ಞಾನ ದಾಹಕ್ಕಾಗಿ ನಡೆದ
ಮುಂದೆ ಮುಂದೆ !

ಕಲ್ಲು-ಮುಳ್ಳು,ಕಾಡು-ಮೇಡು
ಬರಿಗಾಲಿನಿಂದ ಅಲೆದ
ಹಲವಾರು ಕಡೆ ಬಿಡದೇ
ಸತ್ಯ ಶೋಧಿಸಿದ !!

ರುಷಿ-ಮುನಿಗಳ
ಪವಿತ್ರ ತಪೋವನ ಕಂಡ
ತನಗರಿಯದ
ವಿಷಯ ಪೂರ್ತಿ ಮನಗಂಡ !!

ಬೋಧಿವೃಕ್ಷದ ಕೆಳಗೆ
ಅಂದು ಜ್ಞಾನೋದಯ
ಅದುವೇ ಜಗಕೆ
ಅಜ್ಞಾನ ಕಳೆವ ಅರುಣೋದಯ !!

ಆಸೆಯೇ ಮಾನವನ
ಎಲ್ಲ ದುಃಖಕ್ಕೆ ಮೂಲ
ಅದು ಗೆದ್ದವನಿಗಿಲ್ಲ
ಯಾವ ನೋವಿನ ಸಾಲ !!

ತನ್ನದೇ ಸಂಘ ಕಟ್ಟಿ
ದೇಶ ಸಂಚರಿಸಿದ ಬುದ್ಧ
ಜಗಕೆ ಜ್ಞಾನದ
ಬೆಳಕಿನ ಕಿರಣ ಚೆಲ್ಲಿದ !!

ಹಲವಾರು ಕಡೆ ಬಂದಿತು
ವಿರೋದ ವೈರತ್ವ
ಅದೆಲ್ಲವ ಮೆಟ್ಟಿ
ಗಟ್ಟಿಯಾಗಿ ನಿಂತ ಈ ಸಂತ !!

ಅಂಗುಲಿಮಾಲಾ ಅರಚಾಡಿ
ಕೊನೆಗೆ ಶರಣಾದ
ಬುದ್ಧನೆದುರು
ಅವನಾದ ಮುಗ್ಧ !!

ಅರಿತವನಿಗಿಲ್ಲ ದುಃಖ
ಬುದ್ಧನ ನಿತ್ಯ ತತ್ವ
ತಿಳಿದುಕೊಂಡರೆ ಸಾಕು
ಅದರ ಸಾರ-ಸತ್ವ !!

ಮನಸಾರೆ ಬುದ್ಧನಿಗೆ
ಶರಣಾದರೆ ನಾವು
ಬದುಕಿನ ಕಷ್ಟ-ಕಾರ್ಪಣ್ಯ
ಸುಲಭದಲಿ ಗೆಲುವು !!

ಭಗವಾನ್ ಬುದ್ಧನ
ತತ್ವಾಚರಣೆಯೇ ನಾವು
ಅವನಿಗೆ ಸಲ್ಲಿಸುವ
ಗೌರವ ಸಮರ್ಪಣೆ !!

ಬುದ್ಧ ಪೂರ್ಣಮಿಗೆ
ಜಯ-ಜಯವಾಗಲಿ
ನಾಡು-ನಾಡಿನ
ಜನಕೆ ಶುಭವಾಗಲಿ !!

ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top