ಸುಲೋಚನಾ ಮಾಲಿಪಾಟೀಲ ಕವಿತೆ-ಸತ್ಯ ಶೋಧಕ ಬೋಧಕ ಬುದ್ಧ


 

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸತ್ಯ ಶೋಧಕ ಬೋಧಕ ಬುದ್ಧ

ಏಕಾಂತದಲಿ ಕುಳಿತ ಪ್ರಶಾಂತ ವದನ
ದೇಹ ಮತ್ತು ಮನಸ್ಸಿನ ನಿಯಂತ್ರಣ
ಜ್ಞಾನ ಸುಧೆಗೆ ಬುದ್ಧ ಸಮರ್ಪಣ
ಸತ್ಯ ಶೋಧನೆಗೆ ಪ್ರಪಂಚ ಪರ್ಯಟನ
ಬುದ್ಧ ತೋರಿದನೆಲ್ಲೆಡೆ ಆದರ್ಶ ಜೀವನ

ಸತ್ಯ ಅಹಿಂಸೆ ಆಸ್ತೆಯ ಬ್ರಹ್ಮಚರ್ಯ
ಬೌದ್ಧ ಧರ್ಮಕೆ ಅದುವೇ ಧರೋಹರ
ಬುದ್ಧನ ತತ್ವ ಸಿದ್ಧಾಂತಗಳ ಮೌಲ್ಯದ ಆಸರ
ಸ್ವಚ್ಛಂದದ ಜೀವನಕ್ಕೆ ಅದುವೇ ಆಧಾರ
ಆತ ಸಮಾಜ ಪರಿವರ್ತನೆಯ ಹರಿಕಾರ

ಸರ್ವಸಂಗ ಪರಿತ್ಯಾಗದಿ ಬುದ್ಧನಾಗಲಿಲ್ಲ
ಬದುಕಿನ ಸತ್ಯದರ್ಶನದಿ ಬುದ್ಧನಾದನಲ್ಲ
ನಿನ್ನ ನೀ ಗೆಲ್ಲದಿದ್ದರೆ ಪ್ರಯೋಜನವೆನಿಲ್ಲ
ಬುದ್ಧ ಎಲ್ಲಿಯೂ ಏನು ಬರೆದಿಡಲಿಲ್ಲ
ಆತನ ಬೋಧನೆಗಳನ್ನ ಜನ ಮರೆಯಲಿಲ್ಲ

ಜನನ ಜ್ಞಾನೋದಯ ಮೋಕ್ಷದ ಸಂಗಮ
ಬೌದ್ಧ ಪೌರ್ಣಮೆಯಲ್ಲಿ ಬುದ್ಧನ ಸಮಾಗಮ
ಬುದ್ಧನ ಅಷ್ಟಾಂಗಮಾರ್ಗವೇ ಜೀವನದ ಮರ್ಮ
ನಿರ್ವಾಣದ ಸಾಕ್ಷಾತ್ಕಾರದಲ್ಲಿ ಆತ್ಮಾನಂದಾಗಮ
ಆಧ್ಯಾತ್ಮದ ಹಾದಿಯಲ್ಲಿ ಸದ್ಗುಣಗಳ ಪರಂಧಾಮ

ಪ್ರಕೃತಿಯಲ್ಲಿ ಮಿಂದು ಸ್ವಿಕೃತಿಯಲ್ಲಿ ಜ್ಞಾನ ಪಡೆದ
ಸಕಲ ಸಿದ್ಧಿಯಲಿ ಜಗದ ಕೊಳೆಯ ತೊಳೆದ
ಮೋಹಮಾಯೆಯ ಜಾಡು ಅಳಿಸಿದ
ಪವಿತ್ರ ವಿಚಾರದ ದಾರ್ಶನಿಕನಾಗಿ ಹೊಳೆದ
ವಿಶ್ವದೆಲ್ಲೆಡೆ ಬೌದ್ಧ ಧರ್ಮದ ಬೆಳಕು ಚೆಲ್ಲಿದ


  ಶ್ರೀಮತಿ ಸುಲೋಚನಾ ಮಾಲಿಪಾಟೀಲ


 

Leave a Reply

Back To Top