ಕಾವ್ಯ ಸಂಗಾತಿ
ಹನಿಬಿಂದು
ಗುರಿ ತಲುಪು
ಎದ್ದೇಳು ಮನವೇ
ಸುಕ್ಕು ಬಿಡಿಸಿ ನೀ ಏಳು
ಬಲೆಯ ತುಂಡರಿಸಿ
ಮುಸುಕಿನ ಸೋಗು ಬಿಡಿಸಿ
ಹೆಸರ ಮೆರೆಸೆ ದೃಢವಾಗಿ
ಎದ್ದೇಳು ಹೊಸ ಭಾಷ್ಯ ಬರೆಯಲು
ಸಮಾಜ ಏನಾದರೂ ಅನ್ನಲಿ
ನಿನ್ನ ದಾರಿಯಲಿ ಸದಾ ಮುನ್ನಡೆ
ಮರದಂತೆ ಹುಟ್ಟಿ ನಾಲ್ಕು ಜನಕಾಗು
ಮತ್ತೆ ಸಾಧಿಸೆ ಎದ್ದು ನಿಲ್ಲು
ಹೊರಡು ಈಗಲೇ ಗುರಿಯ ಸಾಧಿಸೇ
ನಾಲ್ಕಾರು ಜನ ಕಲಿಯಲಿ ನಿನ್ನಿಂದ
ಹೊಟ್ಟೆ ಕಿಚ್ಚಿನಲ್ಲಿ ಆದರೂ ಮುಂದೆ ಬರಲಿ
ನಿನ್ನ ಹಿಂದೆಯೇ ಸಾಗಿ ಮುಂದೆ ಓಡಲಿ
ನೋಡು ಹೆದರದಿರು
ನಿನ್ನ ದಾರಿಯಲಿ
ನಿನ್ನ ವೇಗದಲಿ
ಸಾಗುತ್ತಲೇ ಇರು
ಎಂದೂ ನಿಲ್ಲದೆ
ಗುರಿಯತ್ತ ಸಾಗುತ್ತಲೇ..
ಸೂರ್ಯನ ಹಾಗೆ..