ಆಶಾ ಯಮಕನಮರಡಿ-ಬಾಳ ಸುದಿನ

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಬಾಳ ಸುದಿನ

ಜನುಮಗಳ ಅನುಬಂಧ ಬೆಸೆದ ಸುದಿನ
ಹೃದಯಗಳು ಕಲೆತು ಒಂದಾದ ಬಂಧನ
ಸಪ್ತಪದಿಗಳ ತುಳಿದು ದೈವ ಸಾಕ್ಷಿಯಾಗಿ
ಮನಮುಟ್ಟಿ ಭಾಷೆನೀಡಿದ ಸುಲಗ್ನ

ಸಾವಿರ ಕಂಗಳ ಸಾಕ್ಷಿಯಾಗಿ ಕೂಡಿ
ಹರಕೆ ಹಾರೈಕೆಗಳ ಫಲವಾದ ಜೋಡಿ
ಹೆತ್ತವರ ಮನಕೆ ತಂಪನೆರೆದು ಸಲುಹಿ
ಒಪ್ಪಿ ಒಂದಾಗಿ ಕೂಡಿ ನಲಿದ ಘಳಿಗೆ ಇದು

ನೂರು ಆಸೆಗಳನು ಕಂಡ ಮನಸುಗಳು
ನನಸಾಗಿಸಲು ಜೊತೆಯಾಗಿ ಬಾಳುವ
ಬಾಳ ಪಯಣದ ಪ್ರಥಮ ಹೆಜ್ಜೆಯ ನಡೆ
ಶುರುವಾದ ದಿನವಿಂದು ಶುಭದಿನವು

ದಾಂಪತ್ಯದಾ ದಾರಿ ಬಲುದೂರ ಸಾಗಿ
ಸಾರ್ಥಕ ಗೊಂಡ ಸುಖ ಪರಿವಾರವು
ಹೊಸ ಪೀಳಿಗೆಗೆ ಶ್ರೀಕಾರದಾ ಘಟ್ಟ
ಬಂದೊದಗಿಸಿದ ಈ ಸುದಿನ ಬಾಳಲಿ ತಂದಿದೆ ನಂದನ


ಆಶಾ ಯಮಕನಮರಡಿ

Leave a Reply

Back To Top