ಕಾವ್ಯ ಸಂಗಾತಿ
ಸುಧಾ ಪಾಟೀಲ್
ಗಜಲ್
ನಿನ್ನ ಪ್ರೇಮದ ಪರಿಯ ಹೇಗೆ ಬಣ್ಣಿಸಲಿ ಸಖಾ
ಅನುದಿನವೂ ಕಾಡುವ ನೆನಪುಗಳ ಹೇಗೆ ಸಂಭಾಳಿಸಲಿ ಸಖಾ
ಒಲವಿನ ಬೀಜ ಬಿತ್ತಿ ನೀನು ಹೃದಯದೊಳಗೆ ಇಣುಕಿದೆಯಲ್ಲ
ನೀನೇ ನನಗೆ ಸರ್ವಸ್ವವೆಂದು ಹೇಗೆ ನೆನಪಿಸಲಿ ಸಖಾ
ದಿನವೂ ನೆನಪಿನ ರಂಗೋಲಿ ಮೂಡಿಸುವ ಪರಿ ಸೋಜಿಗ
ಮನಸಿನ ತಪ್ಪಿದ ತಾಳವ ಹೇಗೆ ವರ್ಣಿಸಲಿ ಸಖಾ
ದೂರದಲ್ಲಿದ್ದರೂ ನನ್ನಲ್ಲೇ ಒಂದಾಗಿ ಏರಿಳಿತದ ಎದೆಬಡಿತ ನೀನಾದೆಯಲ್ಲ
ಪ್ರೇಮ ಕುರುಡೆಂದು ಹೇಗೆ ಸಾಬೀತು ಮಾಡಿಸಲಿ ಸಖಾ
ಮಾತಿನ ಚತುರತೆಯಲ್ಲಿ ಕಟ್ಟಿ ಹಾಕಿದೆ ನೀನು ಅಲ್ಲವೆ
ಸುಧೆಯಲ್ಲಿ ಮುಳುಗಿದ ನಿನ್ನ ಹೇಗೆ ಬಂಧಿಸಲಿ ಸಖಾ
ಸುಧಾ ಪಾಟೀಲ್